ಪ್ರಗತಿವಾಹಿನಿ ಸುದ್ದಿ; ಕಾರವಾರ: ಭಾರತೀಯ ನೌಕಾಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ನೇವಲ್ ಇಂಟಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಾರವಾರದ ಸಿದ್ದರ ಗ್ರಾಮದ ವಿನಾಯಕ ಶಾಂತಾ ಮಹಾಲೆ (32) ಬಂಧಿತ ಆರೋಪಿ. ಆರೋಪಿಯು ಹೇಮಲತಾ ಕೋಠಾರಕರ್ ಎಂಬ ಮಹಿಳೆಯಿಂದ 35 ಸಾವಿರ ಹಣ ಪಡೆದು ಅವರ ಮಗನಿಗೆ ನೇವಿಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ.
ಆರ್ಮಿ ಸಮವಸ್ತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದ ಕಾರಣ ಹೇಮಲತಾ ವಂಚಕನ ಮಾತನ್ನು ನಂಬಿದ್ದರು. ಆದರೆ ಬಳಿಕ ವಂಚನೆಗೆ ಒಳಗಾಗಿದ್ದು ಅರಿವಾಗಿ, ಹೇಮಲತಾ ಅವರು ಕಾರವಾರ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು.
ಆರೋಪಿಯಿಂದ ಪೊಲೀಸರು ಭಾರತೀಯ ಸೇನೆಯ ಸಮವಸ್ತ್ರ, ಶೂಸ್, ಏರ್ ಬ್ಯಾಗ್ 68 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಸಧ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಭಾರತೀಯ ಸೈನ್ಯದಲ್ಲಿ ಹಾಗೂ ಸರಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸುವವರ ಬಗ್ಗೆ ಎಚ್ಚರದಿಂದ ಇರಬೇಕು, ಈ ರೀತಿ ಯಾರಾದರೂ ವಂಚನೆಗೆ ಯತ್ನಿಸಿದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
https://pragati.taskdun.com/latest/bailahongalatwo-accuseddeportation/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ