ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಸವದತ್ತಿಯ ಸ್ವಾದಿಮಠದ ಶ್ರೀ ಶಿವಬಸವ ಮಹಾಸ್ವಾಮೀಜಿಯವರು ರವಿವಾರ ಮುಂಜಾನೆ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು.
ಅಂಬುಲೆನ್ಸ್ ಮುಖಾಂತರ ಪಾರ್ಥಿವ ಶರೀರವನ್ನು ರವಿವಾರ ಮುಂ. *11ಕ್ಕೆ* ಸವದತ್ತಿಯ ಸ್ವಾದಿಮಠಕ್ಕೆ ತರಲಾಗುತ್ತಿದೆ. ಸ್ವಾದಿಮಠದಲ್ಲಿ ಮಧ್ಯಾಹ್ನ 3 ಗಂಟೆವರೆಗೆ* ಸ್ವಾಮೀಜಿಯವರ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅದಾದ ನಂತರ ಅವರ ಪಾರ್ಥಿವ ಶರೀರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ *ವಿಜಯಪುರ ಜಿಲ್ಲೆ ಕುದರಿ ಸಾಲವಾಡಗಿ* ಗ್ರಾಮಕ್ಕೆ ಬೀಳ್ಕೊಡಲಾಗುವುದು.
ಅಲ್ಲಿ ಭಕ್ತಾಧಿಗಳಿಗೆ ಅಂತಿಮ ದರ್ಶನಕ್ಕೆ ಶ್ರೀ ಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾಯಂಕಾಲ *ಕುದರಿ ಸಾಲವಾಡಗಿಯಲ್ಲಿ* ಪೂಜ್ಯರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ.
https://pragati.taskdun.com/latest/govt-employeessankalpa-yatrabelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ