Latest

ತುಂಬುಗರ್ಭಿಣಿ ಆತ್ಮಹತ್ಯೆಗೆ ಶರಣು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತಿಯ ನಿರಂತರ ಕಿರುಕುಳಕ್ಕೆ ಬೇಸತ್ತ ತುಂಬು ಗರ್ಭಿಣಿಯೊಬ್ಬರು ಆತ್ಮಹತ್ಯೆಗೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಶಿವಪುರದಲ್ಲಿ ನಡೆದಿದೆ.

19 ವರ್ಷದ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿರುವ ಗರ್ಭಿಣಿ. ಗಾರ್ಮೆಂಟ್ಸ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಸೌಂದರ್ಯ ಹಾಗೂ ಸಂತೋಷ್ ಪ್ರೀತಿಸಿ ವಿವಾಹವಾಗಿದ್ದರು. ಸೌಂದರ್ಯ 8 ತಿಂಗಳ ಗರ್ಭಿಣಿ. ಗರ್ಭಿಣಿ ಪತ್ನಿಗೆ ಪತಿ ಮಹಾಶಯ ಸಂತೋಷ್ ಪ್ರತಿದಿನ ಕಿರುಕುಳ ನೀಡುತ್ತಿದ್ದ.

ಮೂರು ದಿನಗಳ ಹಿಂದೆ ಗಾರ್ಮೆಂಟ್ಸ್ ಉದ್ಯೋಗಿಗಳೆಲ್ಲ ಸೇರಿ ಸೌಂದರ್ಯ ಸೀಮಂತವನ್ನು ಮಾಡಿದ್ದರು. ಆದರೆ ಈಗ ಸೌಂದರ್ಯ ಶಿವಪುರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಸಂತೋಷ್ ವಿರುದ್ಧ ಸೌಂದರ್ಯ ಕುಟುಂಬದವರು ದೂರು ದಾಖಲಿಸಿದ್ದಾರೆ.

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಮೂವರು ಬಲಿ

https://pragati.taskdun.com/latest/electrick-wire3-deathmysore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button