Kannada NewsLatest

ರೈತರು ಹೈನೋದ್ಯಮದಲ್ಲಿ ತೊಡಗಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ

ಪ್ರಗತಿವಾಹಿನಿ ಸುದ್ದಿ; ಮೂಡಲಗಿ : ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಕೆಎಂಎಫ್‌ನಿಂದ 10 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆಎಂಎಫ್ ಮತ್ತು ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ ಎಂದು ಹೇಳಿದರು.

ರೈತರು ಹೈನೋದ್ಯಮದಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕು. ಇದರಿಂದ ರೈತರ ಆದಾಯವು ಹೆಚ್ಚು ವೃದ್ಧಿಯಾಗುತ್ತದೆ. ಕಬ್ಬು ಬೆಳೆಯ ಜೊತೆಗೆ ರೈತರು ಹೈನುಗಾರಿಕೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ರೈತರ ಆರ್ಥಿಕಾಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಸಾಕಷ್ಟು ಕೆಲಸಗಳನ್ನು ಕೆಎಂಎಫ್ ಮಾಡುತ್ತಿದೆ. ಜೊತೆಗೆ ಉತ್ತಮ ಗುಣಮಟ್ಟದ ಹಾಲನ್ನು ಸಂಘಗಳಿಗೆ ಪೂರೈಸುವಂತೆ ರೈತ ಸಮುದಾಯಕ್ಕೆ ಕರೆ ನೀಡಿದ ಅವರು, ಸಂಘದ ಬೆಳವಣಿಗೆಗಳಲ್ಲಿ ಆಡಳಿತ ಮಂಡಳಿಯೊAದಿಗೆ ರೈತರು ಕೈ ಜೋಡಿಸಬೇಕೆಂದು ತಿಳಿಸಿದರು.

ಹಿರಿಯ ಸಹಕಾರಿ ಮುಖಂಡ ಬಸಗೌಡ ಪಾಟೀಲ(ನಾಗನೂರ), ಮಾಜಿ ಸಚಿವ ಆರ್.ಎಂ. ಪಾಟೀಲ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಮಲ್ಲು ಪಾಟೀಲ, ಸುರೇಶ ಪಾಟೀಲ, ಪ್ರಭಾಶುಗರ ನಿರ್ದೇಶಕ ಕೆಂಚಗೌಡ ಪಾಟೀಲ, ನಾಗನೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿಠ್ಠಲ ಗುಡೆನ್ನವರ, ಎಪಿಎಂಸಿ ನಿರ್ದೇಶಕ ಕೆಂಚಪ್ಪ ಸಕ್ರೆಪ್ಪಗೋಳ, ತಾಪಂ ಮಾಜಿ ಸದಸ್ಯ ಚಂದ್ರು ಬೆಳಗಲಿ, ಜೆಜಿಕೋ ಆಸ್ಪತ್ರೆ ನಿರ್ದೇಶಕ ಶಂಕರ ದಳವಾಯಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರ ಹೊಸಮನಿ, ನಾಗನೂರ ಗ್ರಾಪಂ ಮಾಜಿ ಅಧ್ಯಕ್ಷರಾದ ಗಜಾನನ ಯರಗಣವಿ, ಮುತ್ತೆಪ್ಪ ಖಾನಪ್ಪಗೋಳ, ಮುಖಂಡರಾದ ಬಾಳಗೌಡ ಪಾಟೀಲ, ಬಸವರಾಜ ತಿಗಡಿ, ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರು, ವಿಸ್ತರಣಾಧಿಕಾರಿ ರವಿ ತಳವಾರ, ಸಂಘದ ಕಾರ್ಯದರ್ಶಿ ಸಂಜು ಕರಬನ್ನವರ ಉಪಸ್ಥಿತರಿದ್ದರು.

ರಾಜ್ಯದ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ – ಡಿ.ಕೆ.ಶಿವಕುಮಾರ

https://pragati.taskdun.com/politics/sarvodaya-samaveshacongressd-k-shivakumarmallikarjuna-kharge/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button