ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ 1200 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಗೆ 3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆ.
ಪತ್ರಿಕೆ-1 ರ ಪರೀಕ್ಷೆ ಬೆಳಗ್ಗೆ 9.30 ರಿಂದ ನಡೆದಿದ್ದು ಹೆಸರು ನೋಂದಾಯಿಸಿದ್ದ 1,54,929 ಅಭ್ಯರ್ಥಿಗಳಲ್ಲಿ 1,40,801 ಅಭ್ಯರ್ಥಿಗಳು ಹಾಜರಾದರು. 14,128 ಅಭ್ಯರ್ಥಿಗಳು ಗೈರಾದರು.
ಪತ್ರಿಕೆ 2 ಪರೀಕ್ಷೆಗೆ 2,06,455 ಅಭ್ಯರ್ಥಿಗಳು ನೋಂದಾವಣೆ ಮಾಡಿದ್ದು, 1,92,112 ಅಭ್ಯರ್ಥಿಗಳು ಹಾಜರಾದರು. 14,343 ಅಭ್ಯರ್ಥಿಗಳು ಗೈರಾದರು.
ಪತ್ರಿಕೆ 1 ಮತ್ತು ಪತ್ರಿಕೆ 2 ಎರಡೂ ಪರೀಕ್ಷೆಗೆ ಸೇರಿ ಒಟ್ಟು 3,61,384 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಇವರಲ್ಲಿ 3,32,913 ಅಭ್ಯರ್ಥಿಗಳು ಹಾಜರಾದರು. 28,421 ಅಭ್ಯರ್ಥಿಗಳು ಗೈರಾಗಿದ್ದಾರೆ.
ಪರೀಕ್ಷಾ ಕೇಂದ್ರದ 200 ಮೀ. ಸುತ್ತ ನಿಷೇಧಾಜ್ಞೆ ವಿಧಿಸಲಾಗಿತ್ತು. ಅಭ್ಯರ್ಥಿಗಳನ್ನು ಕೂಲಂಕುಶವಾಗಿ ತಪಾಸಣೆ ಮಾಡಿ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನೀಡಲಾಯಿತು. ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ರೈತರು ಹೈನೋದ್ಯಮದಲ್ಲಿ ತೊಡಗಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ
https://pragati.taskdun.com/latest/balachandra-jarakiholiguddali-poojenaganur/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ