Karnataka NewsLatest

ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಪ್ರಶಿಕ್ಷಣಾ ಶಿಬಿರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಇಲ್ಲಿನ ಕೆಎಲ್ಇ ಸಂಸ್ಥೆಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕದಲ್ಲಿ ಎನ್.ಐ.ಸಿ.ಎಚ್.ಡಿ. ಗ್ಲೋಬಲ್ ಜಾಲತಾಣದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರಲ್ಲಿ ಪ್ರಸವಾ ನಂತರದ ರಕ್ತಹೀನತೆಯ ಚಿಕಿತ್ಸೆಗಾಗಿ ಐವಿ ಐರನ್  ಆದ್ಯತೆ ಎಂಬ ಸಂಶೋಧನೆ ಅಧ್ಯಯನದ ಅಂತಾರಾಷ್ಟ್ರೀಯ ಪ್ರಶಿಕ್ಷಣಾ ಶಿಬಿರವನ್ನು ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶತಮಾನದ ಇತಿಹಾಸ ಹೊಂದಿದ ಕೆಎಲ್ಇ ಸಂಸ್ಥೆಯು ಶಿಕ್ಷಣ ಮತ್ತು ವೈದ್ಯಕೀಯ ಸಂಶೋಧನೆ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದು ಇಂದು ಅಂತಾರಾಷ್ಟ್ರೀಯ ಮಟ್ಟದ ವಿಶ್ವದ ಅನೇಕ ರಾಷ್ಟ್ರಗಳ ಸಂಶೋಧಕ ಪ್ರತಿನಿಧಿಗಳ ಪ್ರಶಿಕ್ಷಣಾ ಶಿಬಿರವು ಬೆಳಗಾವಿಯಲ್ಲಿ ನಡೆಯುತ್ತಿರುವುದು ವಿಶ್ವ ಮಾನ್ಯತೆಗೆ ಉದಾಹರಣೆಯಾಗಿದೆ ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದ ಅಮೆರಿಕದ ಥಾಮಸ್‌ ಜೆಫರ್‌ಸನ್ ವಿಶ್ವವಿದ್ಯಾನಿಲಯದ ಸಂಶೋಧಕ ಡಾ. ರಿಚರ್ಡಡರ್ಮನ್,  ಅಮೆರಿಕದ ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಶನ್ ಹಿರಿಯ ಕಾರ್ಯಕ್ರಮ ಅಧಿಕಾರಿ ಡಾ. ಜಿಯಾನ್‌ ಯಾನ್, ಕೊಲಂಬಿಯಾ ವಿಶ್ವವಿದ್ಯಾಲಯದ ಡಾ. ರಾಬರ್ಟ್ ಗೋಲ್ಡನ್‌ಬರ್ಗ್, ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರೋಜೆಕ್ಟ್ ಮ್ಯಾನೆಜರ್‌ ರೆನಾಟಾ ಹಾಫ್ ಸ್ಟೇಟರ್,  ಅಮೆರಿಕದ ಆರ್.ಟಿ.ಐ ಇಂಟರ್‌ ನ್ಯಾಶನಲ್ ಸಂಸ್ಥೆಯ ಸಂಶೋಧನಾಧಿಕಾರಿ ಎಲಿಜಾಬೆತ್ ಮೆಕ್ಲೂರಲ್,  ಶಿಬಿರದ ನೇತೃತ್ವ ವಹಿಸಿಕೊಂಡ ಹಿರಿಯ ಸಂಶೊಧಕ ಡಾ. ಶಿವಪ್ರಸಾದ ಗೌಡರ ಮಾತನಾಡಿದರು.

ಶಿಬಿರದಲ್ಲಿ ಎನ್.ಐ.ಸಿ.ಎಚ್.ಡಿ. ಗ್ಲೋಬಲ್ ಜಾಲತಾಣದ ಸಂಸೋಧಕ ದೇಶಗಳಾದ ಕಿನ್ಯಾ, ಜಾಂಬಿಯಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಬಾಂಗ್ಲಾದೇಶ ಮತ್ತು ಗ್ವಾಟೆಮಾಲಾ ದೇಶದ ಸಂಶೋಧನಾ ಸಂಯೋಜಕ ವೈದ್ಯರು ಭಾಗವಹಿಸಿದ್ದರು.

ಬೆಳಗಾವಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಕೋಣಿ, ಡಾ. ಸಿಮಲ್ ಥಿಂಡ್, ಡಾ. ಲಾರಾಡಾನಿಯಲ್ ವಾಗನೆರ್, ಡಾ. ಜೆಮಿ ವೆಟ್ಸ್ಕಾಟ್, ಡಾ. ಪೌಲ್, ಡಾ. ಎಂ.ಬಿ.ಬೆಲ್ಲದ, ಡಾ. ಎಂ.ಸಿ.ಮೆಟಗುಡ್ಡ, ಡಾ. ಎಂ.ಎಸ್.ಸೋಮಣ್ಣವರ, ಡಾ. ಅವಿನಾಶ ಕವಿ, ಡಾ. ಉಮೇಶ ಚರಂತಿಮಠ, ಡಾ. ಕುಣಾಲ, ಡಾ. ವೈಶಾಲಿ ಸೇರಿದಂತೆ ವಿಶ್ವದ ಕಿನ್ಯಾ, ಜಾಂಬಿಯಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಬಾಂಗ್ಲಾದೇಶ ಮತ್ತು ಗ್ವಾಟೆಮಾಲಾ ದೇಶದ ಸಂಶೋಧನಾ ಸಂಯೋಜಕ ವೈದ್ಯರು, ಅಮೆರಿಕದ ಫಿಲಡೆಲ್ಪಿಯಾದ ಥಾಮಸ್‌ ಜೆಫರ್ಸನ್ ವಿಶ್ವವಿದ್ಯಾನಿಲಯದ ಸಹಯೋಗಿಗಳು ಮತ್ತು ಕೆನಡಿ ಶ್ರೀವರ್ ನ್ಯಾಶನಲ್ ಇನಸ್ಟಿಟ್ಯೂಟ್ ಆಫ್‌ಚೈಲ್ಡ್ ಹೆಲ್ತ್ ಮತ್ತು ಉಮನ್‌ ಡೆವಲಪಮೆಂಟ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ಮತ್ತುಆರ್.ಟಿ.ಐ ಇಂಟರ್‌ನ್ಯಾಶನಲ್‌ ಡೆಟಾಕೋ ಆರ್ಡಿನೇಟಿಂಗ್‌ ಕೇಂದ್ರದ ಪ್ರತಿನಿಧಿಗಳು ಭಾಗವಹಿಸಿದ್ದರು.
ಹಳೆಯ ವಿದ್ಯಾರ್ಥಿಗಳ ಸಂಘದ  ಪದಾಧಿಕಾರಿಗಳ ಆಯ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button