ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಿಂದೂ ಎನ್ನುವದು ಭಾರತೀಯರ ಅಸ್ಮೀತೆ. ಇದನ್ನು ಕೆಣಕಿ ಸ್ವಪಕ್ಷಿಯರಿಂದಲೆ ಛೀಮಾರಿ ಹಾಕಿಸಿಕೊಂಡು ಬಿಜೆಪಿಯವರನ್ನು ಬಹಿರಂಗ ಚರ್ಚೆಗೆ ಕರೆಯುವ ಮೊದಲು ಅವರನ್ನು ಸಮಾಧಾನ ಪಡಿಸಲಿ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಕಟುವಾಗಿ ಸತೀಶ್ ಜಾರಕಿಹೊಳಿ ಅವರನ್ನು ತರಾಟಗೆ ತೆಗೆದುಕೊಂಡರು.
ನಗರದ ಖಾಸಗಿ ಹೊಟೇಲೊಂದರಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಶಬ್ಧದ ಅರ್ಥದ ಬಗ್ಗೆ ಬಹಳ ಮಾಹಿತಿ ಕಲೆ ಹಾಕಿದ್ದು ಅದನ್ನು ಮೊದಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜಿವಾಲ್ ಅವರಿಗೆ ಅರ್ಪಿಸಿ ಅವರಿಂದ ಪ್ರಮಾಣ ಪತ್ರ ಪಡೆದು ನಂತರ ಬಹಿರಂಗ ಚರ್ಚೆಗೆ ಬರಲಿ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿದ್ದ ರಾಜ್ಯ ವಕ್ತಾರ ಎಮ್ ಬಿ ಝೀರಲಿ ಮಾತನಾಡಿ, ದೇಶದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ 3ಜನ ನ್ಯಾಯಾಧೀಶರು ಸಮಗ್ರ ಚರ್ಚೆ ನಡೆಸಿ ಹಿಂದೂ ಎಂದರೆ ಇದೊಂದು ಜೀವನ ಕ್ರಮ ಸಿಂದೂ ನಾಗರಿಕತೆಯಿಂದ ಬಂದಿದ್ದು ಇದನ್ನು ಭಾರತವಲ್ಲ ಇಡಿ ಪ್ರಪಂಚವೆ ಒಪ್ಪಿಕೊಂಡಾಗ ಇವರು ಇದರ ಮೇಲಿನವರೆ ಎಂದು ಪ್ರಶ್ನಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹಾಗೂ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಹಿಂದೂ ಹಿಂದುತ್ವ ಎನ್ನುವದು ಭಾರತೀಯರ ಜೀವ ನಾಡಿಯಲ್ಲಿ ರಕ್ತಗತವಾದ ವಿಷಯ ಇಂತಹ ವಿಷಯವನ್ನು ವ್ಯರ್ಥ ಚರ್ಚೆಗೆ ತಂದು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವ ಗಿಮಿಕ್ ಮಾಡುವ ಸತೀಶ್ ಜಾರಕಿಹೊಳಿ ಮೊದಲು ತಾವು ಹಿಂದೂ ಹೌದೊ ಅಲ್ಲೋ ಎಂಬುವದನ್ನು ಬಹಿರಂಗಪಡಿಸಬೇಕು. ಮೂಢಾಚಾರ ವಿರೋಧ ಮಾಡುವ ನೆಪದಲ್ಲಿ ಜನರ ಭಾವನೆಯನ್ನೆ ಮೂಢಾಚಾರ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಬಿಜೆಪಿ ಅಧ್ಯಕ್ಷ ಶಾಸಕ ಅನೀಲ ಬೆನೆಕೆ, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಶರದ್ ಪಾಟೀಲ, ಪ್ರಜ್ವಲ್ ಅಥಣಿಮಠ, ಜಿಲ್ಲಾ ಸಮಾಜಿಕ ಜಾಲಾತಾಣ ಜಿಲ್ಲಾ ಸಂಚಾಲಕ ನೀತಿನ ಚೌಗಲೆ, ಜಿಲ್ಲಾ ವಕ್ತಾರ ಶಶಿ ಬಾಡಕರ, ರುದ್ರಣ್ಣ ಚಂದರಗಿ, ಮಂಜುನಾಥ ಪಮ್ಮಾರ, ಪ್ರಸಾದ ದೇವರಮನಿ ಇದ್ದರು.
https://pragati.taskdun.com/latest/actor-lohitashwano-moreheart-attacksandalwood/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ