Kannada NewsLatest

ಜೂ.11ರ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಗೋಳಿಸಲು ಕವಟಗಿಮಠ ಕರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಶ್ವ ಪರಿಸರ ದಿನಾಚರಣೆಯ ಭಾಗವಾಗಿ ಜೂನ್ ೧೧ನೇ ತಾರೀಖಿನಂದು ರಾಜ್ಯಾದ್ಯಂತ ಸಾರ್ವಜನಿಕರು ಹಾಗೂ ಗ್ರಾಮಪಂಚಾಯಿತಿಗಳ ವತಿಯಿಂದ ಕನಿಷ್ಠ ೩೦ ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ.

ಇದರ ಜೊತೆಗೆ ೨೦ ಸಾವಿರ ಚೆಕ್ ಡ್ಯಾಂಗಳನ್ನು ಹೊಸದಾಗಿ ನಿರ್ಮಿಸಲಾಗುವುದು ಮತ್ತು ೧೪ ಸಾವಿರ ಕೆರೆ-ಕಟ್ಟೆ-ಕಲ್ಯಾಣಿ-ಗೋಡೆಕಟ್ಟೆಗಳನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ.

ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್/ತಾಲ್ಲೂಕು ಪಂಚಾಯತ್/ಜಿಲ್ಲಾ ಪಂಚಾಯತ್ ಸದಸ್ಯರುಗಳು ಹಾಗೂ ಇತರ ಜನ ಪ್ರತಿನಿಧಿಗಳು ಕೈ ಜೋಡಿಸಿ ನಿಮ್ಮ ನಿಮ್ಮ ಗ್ರಾಮಗಳಲ್ಲಿ ಪರಿಸರ ರಕ್ಷಣೆಗಾಗಿ ಸಸಿಗಳನ್ನು ನಡೆಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಕರೆ ನೀಡಿದ್ದಾರೆ.

ಪರಿಸರ ರಕ್ಷಣೆಗಾಗಿ ಮುಂದಾಗಬೇಕಾಗಿದೆ. ಹಸಿರು ಬೆಳೆಸಿ – ದೇಶ ಉಳಿಸಿ, ನೀರಿನ ಸದ್ಬಳಕೆಯ ಬಗ್ಗೆಯೂ ಸಹಿತ ಜನ ಜಾಗೃತಿ ಮೂಡಿಸಲು ಮುಂದಿನ ಜನಾಂಗದ ಅಭ್ಯುಧಯಕ್ಕಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯೂ ಹೌದು.

ರಾಜ್ಯವು ನಿರಂತರವಾಗಿ ಬರಗಾಲದಿಂದ ತತ್ತರಿಸುತ್ತಿದೆ. ಪ್ರಸ್ತುತ ಈ ವರ್ಷ ಎಲ್ಲಾ ಪ್ರಮುಖ ನದಿ ಕೆರೆ-ಕಟ್ಟೆಗಳೆಲ್ಲಾ ಬತ್ತಿ ಹೋಗಿವೆ. ನಾವು ತೆಗೆದುಕೊಳ್ಳುತ್ತಿರುವ ಬರ ಪರಿಹಾರದ ಕ್ರಮಗಳು ತಕ್ಷಣದ ತುರ್ತುಗಳಿಗೆ ಪ್ರತಿಕ್ರಿಯಿಸುವ ಕ್ರಮಗಳಾಗಿದ್ದು, ದೀರ್ಘಕಾಲಕ್ಕೆ ಬೇಕಾದ ಮಾರ್ಗೋಪಾಯಗಳನ್ನು ರೂಪಿಸಬೇಕಾಗಿದೆ.
ಈ ಉದ್ದೇಶದಿಂದ ಜಲಾಮೃತ ಎಂಬ ಯೋಜನೆಯನ್ನು ರೂಪಿಸಲಾಗಿದೆ. ಇದರ ಭಾಗವಾಗಿ ಕರ್ನಾಟಕ ಸರ್ಕಾರವು ೨೦೧೯ನ್ನು ಜಲವರ್ಷ ಎಂದು ಘೋಷಣೆ ಮಾಡಿದೆ.

ಜಲಾಮೃತ ಎಂಬ ಅಭಿಯಾನವು ಮುಖ್ಯವಾಗಿ ೪ ಆಧಾರ ಸ್ಥಂಭಗಳನ್ನು ಅಳವಡಿಸಿಕೊಂಡಿದೆ. ಜಲ ಸಾಕ್ಷರತೆ, ಜಲ ಸಂರಕ್ಷಣೆ – ಜಲ ಮೂಲಗಳ ಪುನಶ್ಛೇತನ ಮತ್ತು ಜಲಮೂಲಗಳನ್ನು ಸೃಜಿಸುವುದನ್ನು ಒಳಗೊಂಡಿದ್ದು, ನೀರಿನ ಪ್ರಜ್ಞಾವಂತ ಬಳಕೆ, ಹಸಿರೀಕರಣ.
ಇದನ್ನು ಜನಸಮುದಾಯಗಳ ಸಹಭಾಗಿತ್ವದಲ್ಲಿ ಒಂದು ಆಂದೋಲನವಾಗಿ ರೂಪಿಸಬೇಕೆಂದು ಪ್ರಯತ್ನಿಸಲಾಗುತ್ತಿದೆ. ಜನರಲ್ಲಿ ಅರಿವು ಮೂಡಿಸಲು ಮತ್ತು ಅವರನ್ನು ಕ್ರಿಯಾತ್ಮಕಗೊಳಿಸುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ. ಈ ಆಂದೋಲನವನ್ನು ಇಡೀ ವರ್ಷ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button