Kannada NewsKarnataka NewsLatest

ಮತ್ತೊಂದು ವಿವಾದದಲ್ಲಿ ಸತೀಶ ಜಾರಕಿಹೊಳಿ ; ಇಂಥ ನಾನ್ ಸೆನ್ಸ್ ಹೇಳಿಕೆ ಒಪ್ತೀರಾ ಎಂದು ರಾಹುಲ್ ಗಾಂಧಿಗೆ ಸವಾಲೆಸೆದ ಮಹಾ ಡಿಸಿಎಂ ಫಡ್ನವೀಸ್

 

ಮಹಾರಾಷ್ಟ್ರದಲ್ಲಿ ಹರ ಹರ ಮಹಾದೇವ ಸಿನೇಮಾದಲ್ಲಿ ಶಿವಾಜಿ ಮಹಾರಾಜರ ಕುರಿತು ತಪ್ಪು ಮಾಹಿತಿ ನೀಡಿದ್ದಕ್ಕೆ ಮಾಜಿ ಸಚಿವ ಜೀತೇಂದ್ರ ಅವ್ಹಾಡ ಅವರು ಕಾರ್ಯಕರ್ತರ ಜೊತೆ ಹೋಗಿ ಚಿತ್ರಮಂದಿರದಲ್ಲಿ ಗಲಾಟೆ ಮಾಡಿ, ಕೆಲವರ ಮೇಲೆ ಹಲ್ಲೆ ಮಾಡಿದ್ದರು. ಪೊಲೀಸರು ಅವರನ್ನು ಬಂಧಿಸಿದ್ದಾರೆ. ಶಿವಾಜಿ ಮಹಾರಾಜರ ಇತಿಹಾಸ ತಿರುಚಿದ ವಿವಾದ ಬುಗಿಲೆದ್ದಿರುವಾಗಲೇ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಕುರಿತು ದೇವೇಂದ್ರ ಫಡ್ನವೀಸ್ ಅವರ ಟ್ವೀಟ್ ಮಹಾರಾಷ್ಟ್ರದಲ್ಲಿ ಬೆಂಕಿಗೆ ತುಪ್ಪ ಸುರಿದಂತಾಗಿದೆ.

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇತ್ತೀಚೆಗೆ ನಿಪ್ಪಾಣಿಯಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ‘ಹಿಂದೂ’ ಪದದ ವ್ಯಾಖ್ಯಾನ ಮಾಡಲು ಹೋಗಿ ತೀವ್ರ ವಿವಾದಕ್ಕೆ ಗುರಿಯಾದ ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಆ ವಿವಾದ ಇನ್ನೂ ಸಂಪೂರ್ಣ ಶಮನವಾಗುವ ಮುನ್ನವೇ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ಅದೇ ಕಾರ್ಯಕ್ರಮದಲ್ಲಿ ಧರ್ಮವೀರ ಸಂಭಾಜಿಯನ್ನು ಬ್ರಿಟಿಷರು ಹಿಡಿದು ಕೊಂದಿರುವುದಾಗಿ ಹೇಳುವ ಮೂಲಕ ಸತೀಶ ಜಾರಕಿಹೊಳಿ ಮತ್ತೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸತೀಶ ಜಾರಕಿಹೊಳಿ ವಿಡಿಯೋವನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು “ಈ ರೀತಿಯ ನಾನ್‌ಸೆನ್ಸ್‌ ಹೇಳಿಕೆಯನ್ನು ನೀವು ಒಪ್ಪುತ್ತೀರಾ” ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

 

ಶಿವಾಜಿ ಮಹಾರಾಜರ ಊಟದಲ್ಲಿ ಸಂಭಾಜಿ ಮಹಾರಾಜರು ವಿಷ ಬೆರೆಸಿದ್ದರು. ಹೀಗಾಗಿ ಅವರನ್ನು ಬ್ರಿಟಿಷರು ಹಿಡಿದು ಹತ್ಯೆ ಮಾಡಿದರು. ಹೀಗಿದ್ದೂ ಅವರಿಗೆ ‘ಧರ್ಮವೀರ ಸಂಭಾಜಿ’ ಎಂಬ ಹೆಸರಿಟ್ಟು ಇತಿಹಾಸ ಬರೆಯಲಾಗಿದೆ ಎಂದು ಸತೀಶ ಜಾರಕಿಹೊಳಿ ಹೇಳಿರುವುದು ಸುಮಾರು 42 ಸೆಕೆಂಡ್ ಗಳ ಈ ವಿಡಿಯೊದಲ್ಲಿ ದಾಖಲಾಗಿದೆ. ಈ ದೇಶದ ಇತಿಹಾಸ ಬಹಳ ವಿಚಿತ್ರವಾಗಿದೆ. ಇಂಥ ಇತಿಹಾಸ ತಿಳಿಯಲು ಬಹಳ ಸಮಯ ಬೇಕು ಎಂದು ಸಹ ಅವರು ಹೇಳಿದ್ದಾರೆ.

ಈ ಹೇಳಿಕೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ಈಗಾಗಲೇ ಸತೀಶ ವಿರುದ್ಧ ಎದ್ದಿರುವ ಆಕ್ರೋಶದ ಬೆಂಕಿಗೆ ಮತ್ತೆ ತುಪ್ಪ ಸುರಿದಂತಾಗಿದೆ.

50 ಲಕ್ಷ ರೂ. ವೆಚ್ಚದ ಸುಸಜ್ಜಿತ ಬಸ್ ನಿಲ್ದಾಣದ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button