Kannada NewsLatest

ಬೆಳಗಾವಿ: ಇಬ್ಬರು ಅಂತರಾಜ್ಯ ಕಳ್ಳರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಾಡಹಗಲೇ ಮನೆ ದರೋಡೆ ಮಾಡುತ್ತಿದ್ದ ಇಬ್ಬರು ಅಂತರಾಜ್ಯ ಕಳ್ಳರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗೋವಾ ಮೂಲದ ಪ್ರಕಾಶ್ ಪಾಟೀಲ್, ಖಾನಾಪುರ ಮೂಲದ ಮಹಾರಾಷ್ಟ್ರದ ಸಿಂಧದುರ್ಗ ನಿವಾಸಿ ಮಹೇಶ್ ರಾಮಾ ಕಾಳಗಿನಕೊಪ್ಪ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

Related Articles

ಬೆಳಗಾವಿಯಲ್ಲಿ ಹಾಗೂ ಧಾರವಾಡದಲ್ಲಿ ಒಟ್ಟು 22 ಮನೆಗಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಪಿ.ವಿ ಸ್ನೇಹಾ ನೇತೃತ್ವದಲ್ಲಿ ಎಸಿಪಿಗಳಾದ ನಾರಾಯಣ ಭರಮನಿ, ಚಂದ್ರಪ್ಪ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಸಿಪಿಐ ನಿಂಗನಗೌಡ ಪಾಟೀಲ್, ಕ್ಯಾಂಪ್ ಸಿಪಿಐ ಪ್ರಭಾಕರ ಧರ್ಮಟ್ಟಿ ಅವರನ್ನೊಳಗೊಂಡ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಕೆಂಪೇಗೌಡರ ವಿಚಾರಧಾರೆಗಳ ಹಾದಿಯಲ್ಲಿಯೇ ಅಭಿವೃದ್ಧಿ ಸಂಕಲ್ಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Home add -Advt

https://pragati.taskdun.com/politics/pm-modikempegowda-statueinaugurationcm-basavaraj-bommai/

Related Articles

Back to top button