ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಶುಕ್ರವಾರ ಸಂಜೆ ಪೊಲೀಸ್ ವಶದಲ್ಲಿದ್ದ ಆರೋಪಿ ಸಾವನ್ನಪ್ಪಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.
ಗಾಂಜಾ ಪ್ರಕರಣದಲ್ಲಿ ಆತನನ್ನು ಕರೆತರುವಾಗ ಮಾರ್ಗಮಧ್ಯೆಯೇ ಆತನ ಆರೋಗ್ಯ ಹದಗೆಟ್ಟಿದ್ದು, ವಿಚಾರಣೆ ವೇಳೆ ತೀವ್ರ ಅನಾರೋಗ್ಯಕ್ಕೀಡಾಗಿದ್ದರಿಂದ ಜಿಲ್ಲಾಸ್ಪತ್ರಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.
ಶುಕ್ರವಾರ ಸಾಯಂಕಾಲ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿ ಊರಿನ ಬಸನಗೌಡ ಈರನಗೌಡ ಪಾಟೀಲ (ವಯಸ್ಸು: 45 ವರ್ಷ) ಎಂಬಾತನನ್ನು ಗ್ರಾಮೀಣ ಠಾಣೆಯ NDPS ಪ್ರಕರಣದಲ್ಲಿ ಕರೆದುಕೊಂಡು ಬರುವಾಗ ಕಾಕತಿಯಲ್ಲಿ ಆರೋಗ್ಯ ತೊಂದರೆ ಎಂದಾಗ ಅಲ್ಲಿ ಅವಶ್ಯಕ ಉಪಚಾರ ಕೊಡಿಸಿ, ಸುಧಾರಿಸಿದ ನಂತರ ಠಾಣೆಗೆ ಕರೆತಂದು ಆತನನ್ನು ವಿಚಾರಣೆಗೆ ಒಳಪಡಿಸುವ ಸಮಯದಲ್ಲಿ ಆತನ ಆರೋಗ್ಯದಲ್ಲಿ ಮತ್ತೆ ಏರು ಪೇರು ಆಯಿತು. ತಕ್ಷಣ ಬಿಮ್ಸ್ ನಲ್ಲಿ ಚಿಕಿತ್ಸೆಗಾಗಿ ಕಳಿಸಿದ್ದು, ಒಂದುವರೆ ಗಂಟೆ ನಂತರ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾನೆ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.
ಮೃತನ ಹೆಂಡತಿ ಯಿಂದ ಫಿರ್ಯಾದಿ ಪಡೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆಗೆ CID ಬೆಂಗಳೂರು ಗೆ ಕಳುಹಿಸಿ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ