Kannada NewsKarnataka NewsLatest

*ತೆಕ್ಕಲಕೋಟೆಯಲ್ಲಿ ಉತ್ಖನನದ ವೇಳೆ 5000 ವರ್ಷಗಳ ಹಿಂದಿನ ಮಾನವನ ಅಸ್ಥಿಪಂಜರ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿಯಲ್ಲಿ ನಡೆಯುತ್ತಿರುವ ಉತ್ಖನನದ ಕಾರ್ಯದ ವೇಳೆ 5000 ವರ್ಷಗಳ ಹಿಂದಿನ ಮಾನವನ ಅಸ್ಥಿಪಂಜರಗಳು ಪತ್ತೆಯಾಗಿವೆ.

ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ಉತ್ಖನನ ನಡೆಯುತ್ತಿದೆ. ಉತ್ಖನನದ ತಂಡದ ಸಹ ನಿರ್ದೇಶಕಿಯೂ ಆಗಿರುವ ಅಮೆರ್ಕಾದ ಹಾರ್ಟ್ ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಸುಗಂಧಿ ನೇತೃತ್ವದಲ್ಲಿ ಉತ್ಖನನ ನಡೆಯುತ್ತಿದ್ದು, ಈ ವೇಳೆ ಸುಮಾರು 3-5 ಸಾವಿರ ವರ್ಷಗಳ ಹಿಂದಿನ ಮಾನವ ಅಸ್ಥಿಪಂಜರಗಳು ಪತ್ತೆಯಾಗಿದೆ.

Home add -Advt

ಕಳೆದ ವಾರ ಉತ್ಖನನ ನಡೆಸುತ್ತಿದ್ದಾಗ ಮಾನವ ಮೂಳೆಗಳು ಕಂಡುಬಂದಿದ್ದು, ನಂತರ ಆಳವಾಗಿ ಅಗೆದಾಗ 5.5 ಅಡಿ ಉದ್ದದ ಸಂಪೂರ್ಣ ಅಸ್ಥಿಪಂಜರವು ಪತ್ತೆಯಾಗಿದೆ. ಕಲ್ಲುಗಳನ್ನು ಇರಿಸಿ ಶವ ಸಂಸ್ಕಾರ ಮಾಡಿದ ಸ್ಥಿತಿಯಲ್ಲಿ ಈ ಅಸ್ಥಿಪಂಜರ ದೊರೆತಿದೆ. ಇದು ನೂತನ ಶಿಲಾಯುಗ ಕಾಲಕ್ಕೆ ಸಂಬಂಧಪಟ್ಟಿರಬಹುದು ಎಂದು ತಜ್ಞರು ಹೇಳಿದ್ದಾರೆ.


Related Articles

Back to top button