ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಾಲ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ಮಹಿಳೆಯನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅ.6ರಂದು ಬೆಲ್ಲದಬಾಗೇವಾಡಿ ಗ್ರಾಮದಲ್ಲಿ ಮಲ್ಲವ್ವಾ ಜೀವಪ್ಪಾ ಕಮತೆ ಎಂಬ ಮಹಿಳೆ ಮನೆಯಲ್ಲಿಯೇ ಅನುಮಾನಸ್ಥಾದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಮೃತಳ ಮೊಮ್ಮಗ ವಿಠಲ ಸಿದಲಿಂಗ ಹೂನೂರ ಹುಕ್ಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮೃತಳ ಮರಣೋತ್ತರ ಪರೀಕ್ಷೆಯಲ್ಲಿಯೂ ಕೊಲೆ ಎಂಬುದು ತಿಳಿದುಬಂದಿತ್ತು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ ಪಿ ಹಾಗೂ ಹೆಚ್ಚುವರಿ ಎಸ್ ಪಿ ಮನೋಜ್ ಕುಮಾರ್ ನಾಯಕ ಡಿ.ಎಸ್.ಪಿ ಗೋಕಾಕ ಇವರುಮೊಹ್ಮದ್ ರಫೀಕ್ ತಹಶೀಲ್ದಾರ ಪಿ.ಐ ಹುಕ್ಕೇರಿ ಮತ್ತು ಹಾಗೂ ಶ್ರೀ ಪ್ರಲ್ಲಾಹದ ಚೆನ್ನಗರಿ ಪಿ.ಐ ಸಂಕೇಶ್ವರ ಪೊಲೀಸ ಠಾಣೆ ಮತ್ತು ಸಿಬ್ಬಂದಿ ಜನರ ತಂಡವನ್ನು ನೇಮಿಸಿದ್ದು ಸದರಿ ತಂಡವು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಂಕರ ರಾಮಪ್ಪಾ ಪಾಟೀಲ, ಹಾಗೂ ಮಹೇಶ ಸದಾಶಿವ ಕಬಾಡಗೆ ಎಂದು ಗುರುತಿಸಲಾಗಿದೆ. ಆರೋಪಿಗಳು ಮೃತ ಮಹಿಳೆಯಿಂದ 50,000/- ರೂಪಾಯಿ ಸಾಲ ಪಡೆದುಕೊಂಡಿದ್ದರು. ಆಕೆಯನ್ನೇ ಕೊಲೆ ಮಾಡಿದರೆ ಸಾಲ ಹಾಗೂ ಬಡ್ಡಿ ಕೊಡುವುದು ತಪ್ಪುತ್ತದೆ ಹಾಗೂ ಅವಳ ಮೈ ಮೇಲಿನ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗುವಬಹುದು ಎಂದು ಆರೋಪಿಗಳು ಸಂಚು ಮಾಡಿ ಮಹಿಳೆ ಕೊಲೆಗೈದಿದ್ದರು.
ಮಲ್ಲವ್ವಳಿಗೆ ಸಾಲದ ಬಡ್ಡಿಕೊಡುವ ನೆಪ ಮಾಡಿಕೊಂಡು ಮಹಿಳೆ ಒಬ್ಬರೇ ಇದ್ದಾಗ ಮನೆಗೆ ಬಂದ ಆರೋಪಿಗಳು ಮಲ್ಲವ್ವಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಅವಳ ಮೈ ಮೇಲಿದ್ದ ಸುಮಾರು 20 ಗ್ರಾಂ ತೂಕದ 1,00,000/- ರೂಪಾಯಿ ಬೆಲೆಯುಳ್ಳ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಸಾಕ್ಷಿಪುರಾವೆ ನಾಶಪಡಿಸುವ ಉದ್ದೇಶದಿಂದ ಅವಳ ಶವದ ಮೇಲೆ ನೀರು ಹಾಕಿ ಕೊಲೆ ಮಾಡಲು ಉಪಯೋಗಿಸಿದ ಹೆಗ್ಗ ಒಂದು ಕೈಚೀಲದಲ್ಲಿ ಹಾಕಿ ಅದನ್ನು ಮತ್ತು ಮೃತಳ ಕೈ ಚೀಲಗಳನ್ನು ಕಡಹಟ್ಟಿ ಬಳಿ ಮೃತಳ ಜಮೀನ ದಂಡೆಯಲ್ಲಿ ಇಟ್ಟು ಹೋಗಿದ್ದರು. ಈ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
https://pragati.taskdun.com/bjp-leadermallikarjuna-mutyalmurdersedam/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ