Kannada NewsLatest

ಮರಾಠಾ ಸಮಾಜದ ಸಹಯೋಗದಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ನಿರ್ಧಾರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಳೆದ‌ ಮೂರು‌ ವರ್ಷಗಳ ಹಿಂದೆ ಕೊರೊನಾ ಸೋಂಕಿನ‌ ಭೀತಿಯಲ್ಲಿ ಮರಾಠಾ ಸಮಾಜದವರು ಅನಾರೋಗ್ಯಕ್ಕೆ ತುತ್ತಾದಾಗ ಸೂಕ್ತ ಸಮಯದಲ್ಲಿ ರಕ್ತ ಭಂಡಾರದಲ್ಲಿ ರಕ್ತ ಸಿಗದೆ ಸಾಕಷ್ಟು ತೊಂದರೆ ಅನುಭವಿಸಿದ್ದನ್ನು ಅರಿತ ರಾಜ್ಯ ಬಿಜೆಪಿ ಓಬಿಸಿ ಕಾರ್ಯದರ್ಶಿ, ಸಕಲ ಮರಾಠಾ ಸಮಾಜದ ಆಯೋಜಕ ಕಿರಣ್ ಜಾಧವ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮರಾಠ ಸಮಾಜಕ್ಕಾಗಿ ರಕ್ತ ಭಂಡಾರ ತೆರೆಯುವ ನಿರ್ಧಾರ ಮಾಡಲಾಯಿತು.

ಮಂಗಳವಾರ ನಗರದ ವಿಮಲ್ ಫೌಂಡೇಶನ್ ಕಚೇರಿಯಲ್ಲಿ ನಡೆದ ಸಕಲ ಮರಾಠಾ ಸಮಾಜದ ಮುಖಂಡರೊಂದಿಗೆ ನಡೆಸಲಾದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಿರಣ್ ಜಾಧವ, ಮರಾಠಾ ಸಮಾಜದ ಜನರು ಸದೃಢ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಸೂಕ್ತ ಸಮಯದಲ್ಲಿ ರಕ್ತ ಭಂಡಾರದಲ್ಲಿ ರಕ್ತ ಸಿಗದೆ ಸಾಕಷ್ಟು ತೊಂದರೆಯಾಗಿರುವ ಪ್ರಕರಣಗಳನ್ನು ಸಮಾಜದ ಜನರು ನೋವನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮ ಸಮಾಜದ ಜನರಿಗಾಗಿ ಸಕಾಲದಲ್ಲಿ ರಕ್ತ ಸಿಗುವಂತಾಗಬೇಕು. ಶೀಘ್ರದಲ್ಲೇ ರಕ್ತ ಭಂಡಾರವನ್ನು ಆರಂಭಿಸಲಾಗುವುದು ಇದರ ಸದುಪಯೋಗವನ್ನು ಸಕಲ ಮರಾಠಾ ಸಮಾಜದ ಬಾಂಧವರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ ಸಮೀರ್ ಕುತ್ರೆ, ಡಾ ಮಿಲಿಂದ್ ಹಲ್ಗೇಕರ್, ಡಾ ರಾಯ್ಕರ್, ಡಾ. ಪೋತೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಔಷಧ ತಯಾರಿಕಾ ವಲಯದಲ್ಲಿ ಕರ್ನಾಟಕ- ಅಮೆರಿಕಾ ಸಹಕಾರ ಅಗತ್ಯ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

https://pragati.taskdun.com/cm-basavaraj-bommaimeetingrahul-gupta/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button