ಪುರುಷರನ್ನು ಆಕರ್ಷಿಸಲು ಮಹಿಳೆಯರು ಮಾಡುವ ಈ ಪ್ರಯತ್ನಗಳು ವ್ಯರ್ಥ

ಪ್ರಗತಿ ವಾಹಿನಿ  ವಿಶೇಷ
ಪುರುಷರು ಮತ್ತು ಮಹಿಳೆಯರು ಪರಸ್ಪರರನ್ನು ಆಕರ್ಷಿಸಲು ಹಲವು ಪ್ರಯತ್ನಗಳನ್ನು ಮಾಡುವುದು ಸಾಮಾನ್ಯ. ಹೆಚ್ಚಾಗಿ ಪುರುಷರು ಮಹಿಳೆಯರನ್ನು ಆಕರ್ಷಿಸಲು ಮಾಡುವ ಪ್ರಯತ್ನಗಳ ಬಗ್ಗೆ ಹೆಚ್ಚು ಚರ್ಚೆಯಾದರೂ ಮಹಿಳೆಯರು ಪುರುಷರನ್ನು ಆಕರ್ಷಿಸಲು ಮಾಡುವ ಪ್ರಯತ್ನಗಳು ಕೇವಲ ಸೌಂದರ್ಯಕ್ಕೆ ಸೀಮಿತವಾದದ್ದು ಎಂದು ಭಾವಿಸಲಾಗುತ್ತದೆ.
ಪುರುಷರು ಮಹಿಳೆಯರನ್ನು ಆಕರ್ಷಿಸಲು ಮಾಡುವ ಪ್ರಯತ್ನಗಳ ಪೈಕಿ ಮುಖ್ಯವಾದದ್ದು ತಾನು ದೈರ್ಯಶಾಲಿ ಮತ್ತು ಶಕ್ತಿಶಾಲಿ ಎಂದು ತೋರಿಸಲು ಬಯಸುವುದು. ಸಾಮಾನ್ಯವಾಗಿ ಯುವಕರು ಬೈಕ್‍ಗಳನ್ನು ವೇಗವಾಗಿ ಓಡಿಸುವುದು, ಹೆಚ್ಚು ಸದ್ದು ಮಾಡುತ್ತ ಓಡಿಸುವುದು ಮೊದಲಾದ ಪ್ರಯತ್ನಗಳು ಈ ಸಾಲಿನಲ್ಲಿಯೇ ಬರುತ್ತವೆ. ಆದರೆ ಇಂಥಹ ಪ್ರಯತ್ನಗಳು ಯುವತಿಯರಿಗೂ ಬಹುತೇಕ ಸಲ ಕಿರಿಕಿರಿಗೆ ಕಾರಣವಾಗುತ್ತವೆ ಹೊರತು ಆಕರ್ಷಿತರಾಗುವುದು ಕಡಿಮೆ.

ಅದೇ ರೀತಿ ಮಹಿಳೆಯರು ಸಹ ಪುರುಷರನ್ನು ಆಕರ್ಷಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಇದರಲ್ಲಿ ಮಹಿಳೆಯರು ತಮ್ಮ ಸೌಂದರ್ಯದಿಂದ ಪುರುಷರನ್ನು ಆಕರ್ಷಿಸಬಹುದು ಎಂದುಕೊಳ್ಳುವುದೂ ಸಹ ಮುಖ್ಯವಾದದ್ದು.

ಸೌಂದರ್ಯ ಮುಖ್ಯವಲ್ಲ
ಯಾವುದೇ ಪುರುಷ ತಾನು ನೋಡಲು ಬಯಸುವ ಹೆಣ್ಣು ಸುಂದರವಾಗಿರಬೇಕು ಎಂದು ಬಯಸುವುದು ಸಹಜ. ಆದರೆ ಮಹಿಳೆಯ ಮೇಲಿನ ಪುರುಷನ ಆಕರ್ಷಣೆ ಕೆಲವೇ ಕ್ಷಣಗಳದ್ದು ಎಂಬುದು ಸಹ ಸತ್ಯ. ಒಂದೊಮ್ಮೆ ತಾನು ಭೇಟಿ ಮಾಡಿದ ಹೆಣ್ಣು ಸೌಂದರ್ಯ ಹೊರತುಪಡಿಸಿ ಬೇರೆಲ್ಲದರಲ್ಲೂ ಜೀರೊ ಆಗಿದ್ದರೆ ಪುರುಷರು ಅಂತಹ ಹೆಣ್ಣಿನಲ್ಲಿ ಬಹುಬೇಗ ಆಕರ್ಷಣೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಮಹಿಳೆಯರು ಸೌಂದರ್ಯದ ಬಗ್ಗೆಯೇ ಅನುಗಾಲ ಚಿಂತಿಸುತ್ತ, ಪುರುಷರನ್ನು ಆಕರ್ಷಿಸಲು ಇದೊಂದೇ ಮಾರ್ಗ ಎಂದು ಭಾವಿಸುವುದು ತಪ್ಪು ಎನ್ನುತ್ತಾರೆ ಮನೋ ವಿಜ್ಞಾನಿಗಳು.

ಪುರುಷ ಸ್ಪರ್ಧೆ ಇಷ್ಟಪಡಲ್ಲ
ಯಾವುದೇ ಮಹಿಳೆ, ತನ್ನನ್ನು ವರಿಸಲು ನೂರಾರು ಪುರುಷರು ಕಾಯುತ್ತಿದ್ದಾರೆ ಎಂಬಂತ ಭಾವನೆಯನ್ನು ವ್ಯಕ್ತಪಡಿಸಿದರೆ ಆಕೆಯ ಮೇಲೆ ಆಕರ್ಷಿತನಾಗಿರುವ ಪುರುಷ ದೂರಾಗುತ್ತಾನೆ.
ಪುರುಷರು ಯಾವತ್ತೂ ತನ್ನ ಸಂಗಾತಿಯಾಗುವ ಹೆಣ್ಣಿಗೆ ತಾನೊಬ್ಬನೇ ಮುಖ್ಯ ಎಂಬ ಫೀಲಿಂಗ್‍ನಲ್ಲಿರುತ್ತಾರೆ. ಒಂದೊಮ್ಮೆ ನೀನಿಲ್ಲದಿದ್ದರೂ ನನಗೆ ಬೇರೆ ಪುರುಷ ಸಂಗಾತಿ ಸಿಗಬಲ್ಲರು ಎಂಬ ಭಾವನೆಯನ್ನು ಪುರುಷನ ಮನಸ್ಸಿನಲ್ಲಿ ಪದೇ ಪದೆ ಭಿತ್ತಿದರೆ ಆತನ ಅಹಂಗೆ ಪೆಟ್ಟು ಬೀಳುತ್ತದೆ. ಇದರಿಂದ ಆತ ಆಕರ್ಷಣೆ ಕಳೆದುಕೊಂಡು ದೂರಾಗುವ ಸಂಭವ ಹೆಚ್ಚು.

ನಿರಾಸಕ್ತರಂತೆ ನಟಿಸದಿರಿ
ಕೆಲವು ಮಹಿಳೆಯರು, ಯಾವುದಾದರೂ ವಿಷಯದಲ್ಲಿ, ಅಥವಾ ತಾವು ಯಾರನ್ನು ಆಕರ್ಷಿಸಬೇಕೋ ಆ ಪುರುಷನ ವಿಷಯದಲ್ಲಿ ನಿರಾಸಕ್ತರಂತೆ ನಟಿಸಿದರೆ ಆತ ತನ್ನ ಬಗ್ಗೆ ಹೆಚ್ಚು ಆಸಕ್ತಿ ತಳೆಯುತ್ತಾನೆ ಎಂದು ಭಾವಿಸುವುದೂ ಇದೆ. ಆದರೆ ಇದು ಭಾವನಾತ್ಮಕವಾಗಿ ಜತೆಯಾಗಲು ಬಯಸುವ ಪುರುಷರ ವಿಷಯದಲ್ಲಿ ನಿಜವಾಗುವುದಿಲ್ಲ.

ಕೆಲವು ಕೆಟ್ಟ ಗುರಿಗಳಿರುವ, ತಮಗೇನು ಬೇಕೊ ಅಂಥದ್ದನ್ನು ಪಡೆದು ದೂರಾಗಬಯಸುವ ಸ್ವಾರ್ಥಿ ಪುರುಷರು ಮಾತ್ರ ಹೆಣ್ಣಿನ ಈ ರೀತಿಯ ವರ್ತನೆಯನ್ನು ಇಷ್ಟಪಡುತ್ತಾರೆ (ಇಷ್ಟಪಟ್ಟಂತೆ ತಾವೂ ನಟಿಸುತ್ತಾರೆ). ಆದರೆ ಸಾಮಾನ್ಯವಾಗಿ ಪುರುಷರು ಮನಸ್ಸು ಹಂಚಿಕೊಳ್ಳುವ ಹೆಣ್ಣು ತನ್ನ ಜತೆ ಎಲ್ಲ ವಿಷಯಗಳಲ್ಲಿ ಆಸಕ್ತಿ ತೋರಿಸಿ ಮಾತಾಡುವುದನ್ನು, ತನ್ನ ಬಗ್ಗೆ ಆಸಕ್ತಿ ತೋರಿಸುವುದನ್ನು ಇಷ್ಟಪಡುತ್ತಾರೆ.

ನೀನೇ ದಿಕ್ಕು ಎನ್ನುವ ಅಗತ್ಯವಿಲ್ಲ
ಕಾಲ ಬದಲಾದಂತೆ ಪುರುಷ ಮಹಿಳೆಯನ್ನು ನೋಡುವ ರೀತಿಯೂ ಬದಲಾಗಿದೆ. ನೀವೆ ನನಗೆ ದಿಕ್ಕು, ನನಗೆ ನಿಮ್ಮ ಪಾದವೇ ಗತಿ ಎಂಬಂತಹ ಡೈಲಾಗ್‍ಗಳು ದಶಕಗಳ ಹಿಂದಿನ ಸಿನೇಮಾಗಳಿಗೇ ಸೀಮಿತವಾಗಿರಲಿ.
ಇಂದಿನ ಪೈಪೋಟಿಯ ಯುಗದಲ್ಲಿ ತನ್ನ ಸಂಗಾತಿಯಾಗಬಯಸುವ ಹೆಣ್ಣು ಪ್ರಬುದ್ಧಳಾಗಿರಬೇಕು, ಆತ್ಮ ಸ್ಥೈರ್ಯ ಹೊಂದಿರಬೇಕು ಎಂದೇ ಪುರುಷರು ಬಯಸುತ್ತಾರೆ.

 

ಕಟ್ಟುಪಾಡಿನ ಕವಚ ಕಳಚಿ ಬಂದು ಮೆರೆದ ಭರತನಾಟ್ಯ ಕ್ಷೇತ್ರದ ಮಹಾನ್ ತಾರೆ

https://pragati.taskdun.com/special-article-on-indian-theosophist-dancer-and-choreographer-rukminidevi-arundel/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button