Kannada NewsLatest

ಕನ್ನಡಿಗರ ಉಳಿವಿಗಾಗಿ ರಕ್ತ ಕೊಡುತ್ತೇವೆ- ಕರವೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-

ಕನ್ನಡದ ನೆಲ ಜಲದ ರಕ್ಷಣೆಗಾಗಿ ರಕ್ತವನ್ನು ಚೆಲ್ಲುತ್ತೇವೆ,ಕನ್ನಡಿಗರ ಉಳಿವಿಗಾಗಿ ರಕ್ತವನ್ನು ಕೊಡಲು ಕರ್ನಾಟಕ ರಕ್ಷಣಾ ವೇದಿಕೆ ಕಟಿಬದ್ಧವಾಗಿದೆ. ಕನ್ನಡದ ಹಿತಕ್ಕಾಗಿ ಪ್ರಾಣತ್ಯಾಗ ಮಾಡಲು ಕರವೇ ಯುವ ಸೇನಾನಿಗಳು ಸದಾ ಸಿದ್ಧ ಎಂದು ಕರವೇ ಯುವ ಘಟಕದ ಜುಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದರು.ಬೆಳಗಾವಿಯ ಮಹಾಂತೇಶ ನಗರದ ಗಾಜಿನ ಮನೆಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರ ಹುಟ್ಟು ಹಬ್ಬದ ನಿಮಿತ್ಯ ಕರವೇ ಯುವ ಘಟಕ ಆಯೋಜಿಸಿದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಯುವ ಸೇನಾನಿಗಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕನ್ನಡದ ಸೇನಾಪತಿ ಟಿಎ ನಾರಾಯಣಗೌಡರ ಜನ್ಮದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದ್ದಾರೆ. ಯುವ ಸೇನಾನಿಗಳ ಕನ್ನಡದ ರಕ್ತ ಬಡ ರೋಗಿಗಳ ಚಿಕಿತ್ಸೆಗೆ ಅನಕೂಲವಾಗಲಿ ಇಂತಹ ರಕ್ತದಾನ ಶಿಬಿರಗಳು ನಿರಂತರವಾಗಿ ನಡೆಯಲಿ ಎಂದರು.ಬೆಳಗಾವಿ ಜಿಲ್ಲೆಯ ಯುವಕರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗಡಿ ಭಾಗದ ಬೆಳಗಾವಿ ಜಿಲ್ಲೆಗೆ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಬೇಕು. ಅದಕ್ಕಾಗಿ ಕರವೇ ಯುವ ಘಟಕದ ಯುವ ಸೇನಾನಿಗಳು ಎರಡೂ ಸರ್ಕಾರಗಳ ಮೇಲೆ ಒತ್ತಡ ಹೇರಲು ಹೋರಾಟ ಆರಂಭಿಸಲಿದ್ದಾರೆ ಎಂದು ದೀಪಕ ಗುಡಗನಟ್ಟಿ ತಿಳಿಸಿದರುಕರವೇ ಜಿಲ್ಲಾದ್ಯಕ್ಷ ಮಹಾದೇವ ತಳವಾರ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ದಶಕಗಳಿಂದ ಬೆಳಗಾವಿಯಲ್ಲಿ ಕನ್ನಡದ ಸೇವೆ ಮಾಡುವುದರ ಜೊತೆಗೆ ಸಮಾಜ ಸೇವೆ ಮಾಡುತ್ತಾ ಬಂದಿದೆ ನೆಲ ಜಲ ಭಾಷೆಯ ಪ್ರಶ್ನೆ ಬಂದಾಗ ಕರವೇ ಹೋರಾಟ ಮಾಡುವುದರ ಜೊತೆಗೆ ಕನ್ನಡಿಗರ ಹಿತಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದರುಐವತ್ತಕ್ಕೂ ಹೆಚ್ಚು ಕರವೇ ಕಾರ್ಯಕರ್ತರು ರಕ್ತದಾನ ಮಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button