ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗೆ ಮಸಿ ಬಳಿದ ಬೆನ್ನಲ್ಲೇ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮಹಾರಾಷ್ಟ್ರ ಬಸ್ ಗಳ ಮೇಲೂ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ಮಹಾರಾಷ್ಟ್ರದ ಅಕ್ಕಲಕೋಟೆಯಿಂದ ಬಂದಿದ್ದ ಎಂಎಸ್ ಆರ್ ಟಿಸಿ ಸಾರಿಗೆ ಸಂಸ್ಥೆ ಬಸ್ ತಡೆದ ಕಾರ್ಯಕರ್ತರು, ಬಸ್ ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕನ್ನಡ ಧ್ವಜ ಹಿಡಿದು ಬಸ್ ಮೇಲೆ ಹತ್ತಿ ಕುಳಿತು ಬೆಳಗಾವಿ ನಮ್ಮದೇ ಎಂದು ಘೋಷಣೆ ಕೂಗಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾರ್ಯಕರ್ತರು, ಜಿಲ್ಲೆಯ ಗಡಿ ಭಾಗದಲ್ಲಿ ಬೆಳಗಾವಿ ನಮ್ಮದೇ ಎಂದು ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.
ಮಹಾರಾಷ್ಟ್ರ-ಬೆಳಗಾವಿ ಬಸ್ ಸಂಚಾರ ಸ್ಥಗಿತ
https://pragati.taskdun.com/maharashtrabelagavimsrtc-busstopborder-issue/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ