LatestUncategorized

ಚರ್ಮ ಕ್ಯಾನ್ಸರ್ ಜಾಗೃತಿಗೆ ಬೀಚ್ ನಲ್ಲಿ ಬಟ್ಟೆ ಕಳಚಿದ 2,500 ಜನ !

ಪ್ರಗತಿವಾಹಿನಿ ಸುದ್ದಿ, ಸಿಡ್ನಿ: ಚರ್ಮದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಯುಎಸ್ ಛಾಯಾಚಿತ್ರ ಕಲಾವಿದ ಸ್ಪೆನ್ಸರ್ ಟ್ಯೂನಿಕ್ ಅವರಿಗೆ ಪೋಸ್ ನೀಡಲು ಸುಮಾರು 2,500 ಜನರು ಬೆತ್ತಲಾಗಿದ್ದಾರೆ.

ಸಾಮೂಹಿಕ ನಗ್ನ ಫೋಟೋ ಶೂಟ್‌ಗಳನ್ನು ಪ್ರದರ್ಶಿಸಲು ವಿಶ್ವಾದ್ಯಂತ ಹೆಸರುವಾಸಿಯಾದ ಟ್ಯೂನಿಕ್, ಅನೇಕರು  ಕಡಲ ತೀರದಲ್ಲಿ ನಗ್ನ ಸ್ನಾನ ಮಾಡುವ ಮೊದಲು ಇದರಲ್ಲಿ ಪಾಲ್ಗೊಳ್ಳುವವರಿಗೆ ನಾನಾ ರೀತಿಯ ಭಂಗಿಗಳ ಬಗ್ಗೆ ನಿರ್ದೇಶಿಸಲು ಮೆಗಾಫೋನ್ ಬಳಸಿದರು

ನ್ಯೂಯಾರ್ಕ್ ಮೂಲದ ಕಲಾವಿದ ಆಸ್ಟ್ರೇಲಿಯಾದ ನಾಲ್ಕನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ರೂಪವಾದ ಮೆಲನೋಮಾದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ನೇಕೆಡ್ ಆರ್ಟ್ ಇನ್‌ಸ್ಟಾಲೇಶನ್‌ನಲ್ಲಿ ಚಾರಿಟಿಗೆ ಸಹಕಾರ ನೀಡಿದ್ದಾರೆ. ಫೆಡರಲ್ ಸರಕಾರವು ಈ ವರ್ಷ ಆಸ್ಟ್ರೇಲಿಯಾದಲ್ಲಿ 17,756 ಹೊಸ ಚರ್ಮದ ಕ್ಯಾನ್ಸರ್ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು ಮತ್ತು 1,281 ಆಸ್ಟ್ರೇಲಿಯನ್ನರು ಈ ಕಾಯಿಲೆಯಿಂದ ಸಾಯುತ್ತಾರೆ ಎಂದು ಅಂದಾಜಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲಿಂಡ್ನರ್, “ನಾನು ಒಳಗೊಳಗೇ ಆತಂಕಿತನಾಗಿದ್ದೆ. ಆದರೆ ಇದು ಅದ್ಭುತ ಎನಿಸಿದೆ. ಅಲ್ಲಿ ಪಾಲ್ಗೊಂಡವರೆಲ್ಲರೂ ಗೌರವಾನ್ವಿತರು. ಇದು ನಿಜಕ್ಕೂ ಸಂತೋಷ ನೀಡಿದೆ,” ಎಂದರು.

2010 ರಲ್ಲಿ ಸಿಡ್ನಿಯಲ್ಲಿ 5,200 ಆಸ್ಟ್ರೇಲಿಯನ್ನರು ಸಿಡ್ನಿ ಒಪೇರಾ ಹೌಸ್‌ನಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದಾಗ ಟ್ಯೂನಿಕ್ ಕೊನೆಯ ಬಾರಿಗೆ ಸಾಮೂಹಿಕ ಚಿತ್ರೀಕರಣವನ್ನು ನಿರ್ದೇಶಿದ್ದರು.

ಭೀಕರ ಅಪಘಾತ; ಪ್ರಾಧ್ಯಾಪಕ ಸ್ಥಳದಲ್ಲೇ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button