ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
22 ವರ್ಷದ ಯುವತಿ ನವೆಂಬರ್ 25ರಂದು ಮಧ್ಯರಾತ್ರಿ ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಳು. ಯುವತಿ ತನ್ನ ಸ್ನೇಹಿತರ ಮನೆಯಿಂದ ತನ್ನ ಮನೆಗೆ ಹೋಗಲು ಬೈಕ್ ಬುಕ್ ಮಾಡಿದ್ದಳು. ಆಕೆಯನ್ನು ಡ್ರಾಪ್ ಮಾಡಲು ಕರೆದೊಯ್ದ ರ್ಯಾಪಿಡೋ ಬೈಕ್ ಸವಾರ ಆಕೆಯ ಸ್ಥಿತಿಯನ್ನು ಕಂಡು ತನ್ನ ರೂಮಿಗೆ ಕರೆದೊಯ್ದಿದ್ದಾನೆ. ಬಳಿಕ ತನ್ನ ಸ್ನೇಹಿತನನ್ನೂ ಕರೆದು ಅತ್ಯಾಚಾರ ನಡೆಸಿದ್ದಾರೆ.
ಯುವತಿ ಬೆಳಿಗ್ಗೆ ಪ್ರಜ್ಞೆ ಬಂದ ಮೇಲೆ ತನ್ನ ಪರಿಸ್ಥಿತಿ ಗಮನಿಸಿ ತಕ್ಷಣ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದಾಳೆ. ಈ ವೇಳೆ ಅತ್ಯಾಚಾರವಾಗಿರುವುದು ಗೊತ್ತಾಗಿದೆ. ಕೂಡಲೆ ಆಕೆ ಪೊಲಿಸರಿಗೆ ಮಾಹಿತಿ ನೀಡಿದ್ದಾಳೆ. ಆಗ್ನೇಯ ವಿಭಾಗದ ಪೊಲೀಸರು ಸೂಕ್ತ ಕ್ರಮಕ್ಕೆ ಮುಂದಾಗಿ ಮೂವರು ಆರೊಪಿಗಳನ್ನು ಬಂಧಿಸಿದ್ದಾರೆ.
ರ್ಯಾಪಿಡೋ ಬೈಕ್ ಸವಾರ, ಆತನ ಸ್ನೇಹಿತ ಹಾಗೂ ಓರ್ವ ಮಹಿಳೆಯನ್ನು ಬಂಧಿಸಲಾಗಿದ್ದು, ಬಂಧತರಲ್ಲಿ ಓರ್ವ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಪ್ರಜರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
https://pragati.taskdun.com/gang-rapegirlbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ