Kannada NewsLatest

10 ಕೋಟಿ  ವೆಚ್ಚದ ಪಾರಿಷ್ವಾಡ ಕ್ರಾಸ್- ಬೆಂಡಿಗೇರಿ ರಸ್ತೆ ಅಭಿವೃದ್ಧಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಾರಿಶ್ವಾಡ ಕ್ರಾಸ್ ನಿಂದ ಬೆಂಡಿಗೇರಿ ಗ್ರಾಮದ ವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 10 ಕೋಟಿ ರೂ,ಗಳನ್ನು ಮಂಜೂರು ಮಾಡಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.


“ಕಳೆದ ನಾಲ್ಕೂವರೆ ವರ್ಷಗಳಿಂದ ಬೆಳಗಾವಿ ಗ್ರಾಮೀಣ ಎಲ್ಲ ಕ್ಷೇತ್ರಗಳಲ್ಲಿಯೂ ಗಣನೀಯವಾಗಿ ಅಭಿವೃದ್ಧಿಗೊಂಡಿದೆ. ನಾನು ಶಾಸಕಿಯಾಗುವ ಪೂರ್ವದಲ್ಲಿಯೇ ಎಲ್ಲ ಗ್ರಾಮಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಅದರಂತೆ ಹಂತ ಹಂತವಾಗಿ ಅಭಿವೃದ್ಧಿ ಪಡಿಸುತ್ತಾ ಬಂದಿದ್ದೇನೆ,” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

“ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಇಡೀ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಪ್ರತಿನಿಧಿಸಿದ್ದೇನೆ. ನಾನು ರೈತನ ಮಗಳಾಗಿ ಹುಟ್ಟಿದ್ದು ಅದರಲ್ಲೂ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ನನಗೆ ಹೆಮ್ಮೆ ಇದೆ.ಕೇವಲ ಒಬ್ಬ ಸಾಮಾನ್ಯ ಕಾರ್ಯಕರ್ತೆಯಂತೆ ನಿಮ್ಮೆಲ್ಲರ ಸೇವೆಗಳಿಗೆ ಅಣಿಯಾಗಿದ್ದೇನೆ, ಸರ್ವ ಜನಾಂಗಗಳ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಎಲ್ಲರಿಗೂ ಇನ್ನಷ್ಟೂ ಹತ್ತಿರವಾಗಿದ್ದೇನೆ,” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ,, ಸಿ.ಸಿ. ಪಾಟೀಲ, ಅಡಿವೇಶ ಇಟಗಿ, ಸುರೇಶ ಇಟಗಿ, ಇನಾಯತ್ ಅತ್ತಾರ, ಪರ್ವತಗೌಡ ಪಾಟೀಲ, ಬಸಮಣ್ಣ ಶೀಗಿಹಳ್ಳಿ, ನ್ಯಾಯವಾದಿ ಗಿಡ್ಡಬಸನ್ನವರ, ಎಕ್ಸಿಕ್ಯೂಟಿವ್ ಎಂಜಿನಿಯರ್ ನಾಯ್ಕ್, ಗೌಸ್ ಸಿಂಪಿ, ಶಂಕರಗೌಡ ಪಾಟೀಲ, ಭೀಮಶಿ ಹಾದಿಮನಿ, ಕಲ್ಲಪ್ಪ ವನ್ನೂರ, ಆಪ್ತ ಸಹಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಮಿತ್ ಶಾನಂತವರೇ ದೇಶದ ಹೋಂ ಮಿನಿಸ್ಟರ್ ಆಗಿದ್ದಾರೆ; BJPಯದ್ದು ಬದನೆಕಾಯಿ ನೀತಿ; ಕೆಂಡಕಾರಿದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button