ಮಹಾರಾಷ್ಟ್ರ ಸಚಿವರ ಬೆಳಗಾವಿ ಪ್ರವಾಸ ಪಟ್ಟಿ ಬಿಡುಗಡೆ: ಬೆಳಗಾವಿಯಲ್ಲಿ ಏನು ಮಾಡಲಿದ್ದಾರೆ? ಇಲ್ಲಿದೆ ನೋಡಿ, ಇಡೀ ಪ್ರವಾಸ ಪಟ್ಟಿಯಲ್ಲಿ ಎಲ್ಲೂ ಸಾರ್ವಜನಿಕ ಸಭೆ, ಭಾಷಣದ ಉಲ್ಲೇಖವಿಲ್ಲ
ಪ್ರಗತಿವಾಹಿನಿ ಸುದ್ದಿ, ಮುಂಬೈ – ಕರ್ನಾಟಕಕ್ಕೆ ಸೇರಬೇಕೆಂದು ಪಟ್ಟು ಹಿಡಿದಿರುವ ಮಹಾರಾಷ್ಟ್ರದ ವಿವಿಧ ಪ್ರದೇಶಗಳ ಕನ್ನಡಿಗರ ಮನವೊಲಿಸುವ ಕೆಲಸ ಮಾಡುವುದನ್ನು ಬಿಟ್ಟು ಕನ್ನಡಿಗರನ್ನು ಕೆರಳಿಸುವ ಪ್ರಯತ್ನಕ್ಕೆ ಮುಂದಾಗಿರುವ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಡಿ.3ರಂದು ಬೆಳಗಾವಿಗೆ ಆಗಮಿಸಲಿದ್ದಾರೆ.
ಈ ಕುರಿತ ಅವರ ಪ್ರವಾಸ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಿದೆ.
ಬೆಳಗ್ಗೆ 9 ಗಂಟೆಗೆ ಕೊಲ್ಲಾಪುರದಿಂದ ರಸ್ತೆಯ ಮೂಲಕ ಬೆಳಗಾವಿಯ ಶಹಾಪುರದ ಛತ್ರಪತಿ ಶಿವಾಜಿ ಉದ್ಯಾನಕ್ಕೆ 11 ಗಂಟೆಗೆ ಅವರು ಆಗಮಿಸುವರು. ಅಲ್ಲಿಂದ ಹಿಂಡಲಗಾಕ್ಕೆ ತೆರಳಿ, ಗಡಿ ಗಲಾಟೆಯಲ್ಲಿ ಸಾವನ್ನಪ್ಪಿದವರ ಸ್ಮಾರಕಕ್ಕೆ ತೆರಳುವರು. ನಂತರ ರಾಮಲಿಂಗ ಖಿಂಡಿಯ ಮಹಾರಾಷ್ಟ್ರ ಏಕೀಕರಣ ಸಮಿತಿ ಕಚೇರಿ, ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಚೇರಿ, ತುಕಾರಾಂ ಮಹಾರಾಜ ಸಾಂಸ್ಕೃತಿಕ ಕಾರ್ಯಾಲಯಕ್ಕೆ ಭೇಟಿ ನೀಡುವರು.
ನಂತರ ಗಡಿ ಗಲಾಟೆಯಲ್ಲೆ ಸಾವಿಗೀಡಾದ ಪಾಟೀಲ ಮಾಳಾದ ಪ್ರಕಾಶ ಮರಗಾಳೆ ಮನೆ, ಮಹಾತ್ಮಾ ಫುಲೆ ರಸ್ತೆಯ ಮಧಪ ಭಾಂಡೇಕರ ಮನೆ, ಹಳೆ ಬೆಳಗಾವಿಯ ವಿದ್ಯಾ ಶಿಂದೋಳ್ಕರ್ ಮನೆಗೆ ಭೇಟಿ ನೀಡುವರು. ನಂತರ ಸುಳಗಾ, ಉಚಗಾಂವ್, ಬೆಳಗುಂದಿ, ವಿಜಯ ನಗರ, ಕಂಗರಾಳಿಗೆ ಭೇಟಿ ನೀಡಿ ಸಂಜೆ 6.10 ಗಂಟೆಗೆ ಬೆಳಗಾವಿಯಿಂದ ವಾಪಸ್ ಕೊಲ್ಲಾಪುರಕ್ಕೆ ತೆರಳುವರು.
ಇನ್ನೋರ್ವ ಸಚಿವ ಶಂಭುರಾಜ ದೇಸಾಯಿ ಮತ್ತು ಮಹಾರಾಷ್ಟ್ರ ಗಡಿ ಉನ್ನತಮಟ್ಟದ ಸಮಿತಿ ಅಧ್ಯಕ್ಷ, ಸಂಸದ ಧರ್ಮಶೀಲ್ ಮಾನೆ ಸಹ ಚಂದ್ರಕಾಂತ ಪಾಟೀಲ ಅವರ ಜೊತೆ ಪ್ರವಾಸ ಮಾಡಲಿದ್ದಾರೆ.
ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಅವರ ಪ್ರವಾಸ ಪಟ್ಟಿ ಕಲಿಸಲಾಗಿದ್ದು,. ವೈ ಕೆಟೆಗರಿ ಭದ್ರತೆ ಒದಗಿಸುವಂತೆ ಕೋರಲಾಗಿದೆ.
ಇಡೀ ಪ್ರವಾಸ ಪಟ್ಟಿಯಲ್ಲಿ ಎಲ್ಲೂ ಸಾರ್ವಜನಿಕ ಸಭೆ, ಭಾಷಣದ ಉಲ್ಲೇಖವಿಲ್ಲ. ಕೇವಲ ಮುಗ್ದ ಮರಾಠಿ ಭಾಷಿಕರ ಕಣ್ಣೊರೆಸುವ ಮತ್ತು ಕನ್ನಡಿಗರನ್ನು ಕೆರಳಿಸುವ ಉದ್ದೇಶ ಈ ಪ್ರವಾಸದ ಹಿಂದಿರುವುದು ಸ್ಪಷ್ಟವಾಗಿ ಘೋಚರಿಸುತ್ತದೆ.
ಪ್ರವಾಸ ಪಟ್ಟಿ ಇಲ್ಲಿದೆ – Tour Dt 03 Dec 2022
ಡಿ. 2ರಂದು ಬೆಳಗಾವಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ
https://pragati.taskdun.com/karnataka-cm-basavraj-bommai-visits-belagavi-district-on-december-2nd/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ