ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್: ಬಾಲಿವುಡ್ ನ ‘ಲೈಗರ್’ ಚಿತ್ರಕ್ಕೆವಿದೇಶದಿಂದ ಧನಸಹಾಯಕ್ಕಾಗಿ ವಿಜಯ್ ದೇವರಕೊಂಡ ಅವರನ್ನು ಇಡಿ ಸುದೀರ್ಘ ವಿಚಾರಣೆಗೆ ಗುರಿಪಡಿಸಿದೆ.
ಸಂಸ್ಥೆಯು ಕೆಲವು ದಿನಗಳ ಹಿಂದೆ ಚಲನಚಿತ್ರ ನಿರ್ಮಾಪಕ ಪುರಿ ಜಗನ್ನಾಥ್ ಮತ್ತು ನಿರ್ಮಾಪಕಿ ಚಾರ್ಮಿ ಕೌರ್‌ಗೆ ಸಮನ್ಸ್ ನೀಡಿತ್ತು ಎಂದು ವರದಿಗಳು ತಿಳಿಸಿವೆ.
ತೆಲಂಗಾಣದ ರಾಜಕಾರಣಿಯೊಬ್ಬರು ವಿದೇಶದಿಂದ ಪಡೆದ ಕೋಟಿಗಟ್ಟಲೆ ಹಣವನ್ನು ಚಿತ್ರಕ್ಕೆ ಹೂಡಿಕೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಅನನ್ಯಾ ಪಾಂಡೆ ಮತ್ತು ಅಮೆರಿಕದ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ನಟಿಸಿರುವ ಈ ಚಿತ್ರವು ಸುಮಾರು 100 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಸದ್ದು ಮಾಡಲಿಲ್ಲ. ಇದು ದೇವರಕೊಂಡ ಅವರ ಚೊಚ್ಚಲ ಬಾಲಿವುಡ್ ಪ್ರಾಜೆಕ್ಟ್ ಆಗಿತ್ತು.
ಮರಾಠಿ ಪುಂಡ ವಿದ್ಯಾರ್ಥಿಗಳ ಬಂಧನಕ್ಕೆ ಆಗ್ರಹ; ಪೊಲೀಸರ ವಿರುದ್ಧವೂ ಕ್ರಮಕ್ಕೆ ಒತ್ತಾಯ; ಕರವೇ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ