Kannada NewsKarnataka NewsLatest

ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ಹಠಾತ್ ಮುಂದೂಡಿಕೆ; ಕಾರಣ ಗೊತ್ತೇ?

 

ಪ್ರಗತಿವಾಹಿನಿ ಸುದ್ದಿ, ಮುಂಬೈ – ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಗಡಿ ಸಲಹಾ ಸಮಿತಿ ಅಧ್ಯಕ್ಷರ ಭೇಟಿ ಹಠಾತ್ ಮುಂದೂಡಿಕೆಯಾಗಿದೆ.

ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ, ಇನ್ನೋರ್ವ ಸಚಿವ ಶಂಭುರಾಜ ದೇಸಾಯಿ ಮತ್ತು ಮಹಾರಾಷ್ಟ್ರ ಗಡಿ ಉನ್ನತಮಟ್ಟದ ಸಮಿತಿ ಅಧ್ಯಕ್ಷ, ಸಂಸದ ಧರ್ಮಶೀಲ್ ಮಾನೆ ಡಿ.3ರಂದು ಬೆಳಗಾವಿಗೆ ಆಗಮಿಸುವವರಿದ್ಜರು.  ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಅವರ ಪ್ರವಾಸ ಪಟ್ಟಿ ಕಲಿಸಲಾಗಿದ್ದು,. ವೈ ಕೆಟೆಗರಿ ಭದ್ರತೆ ಒದಗಿಸುವಂತೆ ಕೋರಲಾಗಿತ್ತು.

ಬೆಳಗಾವಿಯ ಸುಮಾರು 20 ಪ್ರದೇಶಗಳಿಗೆ ಅವರು ಭೇಟಿ ನೀಡುವವರಿದ್ದರು. ಗಡಿ ವಿವಾದದ ಹಿನ್ನೆಲೆಯಲ್ಲಿ ಕನ್ನಡಿಗರನ್ನು ಕೆರಳಿಸುವ ಮತ್ತು ಮರಾಠಿ ಭಾಷಿಕರ ಕಣ್ಣೊರೆಸುವ ತಂತ್ರವಾಗಿ ಅವರ ಪ್ರವಾಸ ನಿಗದಿಯಾಗಿತ್ತು.

 

ಆದರೆ ಇದೀಗ ಅವರು ಪ್ರವಾಸ ಡಿ.6ಕ್ಕೆ ಮುಂದೂಡಿಕೆಯಾಗಿದೆ. ಈ ಕುರಿತು ಚಂದ್ರಕಾಂತ ಪಾಟೀಲ ಟ್ವೀಟ್ ಮಾಡಿದ್ದಾರೆ. ಅಂಬೇಡ್ಕರ್ ಮಹಾಪರಿನಿರ್ವಾಣ ದಿನವಾದ ಡಿ.6ರಂದು ಆಯೋಜಿಸಿರುವ ಕಾರ್ಯಕ್ರಮಕ್ಕೆ ಅಂಬೇಡ್ಕರ್ ವಾದಿ ಸಂಘಟನೆ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಭೇಟಿಯನ್ನು ಮುಂದೂಡಲಾಗಿದೆ ಎಂದು ಚಂದ್ರಕಾಂತ ಪಾಟೀಲ ತಿಳಿಸಿದ್ದಾರೆ.

 

ಮಹಾರಾಷ್ಟ್ರ ಸಚಿವರ ಬೆಳಗಾವಿ ಪ್ರವಾಸ ಪಟ್ಟಿ ಬಿಡುಗಡೆ: ಬೆಳಗಾವಿಯಲ್ಲಿ ಏನು ಮಾಡಲಿದ್ದಾರೆ? ಇಲ್ಲಿದೆ ನೋಡಿ, ಇಡೀ ಪ್ರವಾಸ ಪಟ್ಟಿಯಲ್ಲಿ ಎಲ್ಲೂ ಸಾರ್ವಜನಿಕ ಸಭೆ, ಭಾಷಣದ ಉಲ್ಲೇಖವಿಲ್ಲ

https://pragati.taskdun.com/chief-minister-chandrakanta-patil-releases-belgaum-itinerary-what-will-he-do-in-belgaum-see/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button