ಪ್ರಗತಿವಾಹಿನಿ ಸುದ್ದಿ; ಮುಂಬೈ: ಕ್ರಿಸ್ ಮಸ್ ಹಬ್ಬ, ಹೊಸ ವರ್ಷಾಚರಣೆಗೆ ಇನ್ನೂ ಹಲವು ದಿನ ಬಾಕಿ ಇರುವಾಗಲೇ ವಾಣಿಜ್ಯ ನಗರಿ ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂಜಾಗೃತಾ ಕ್ರಮವಾಗಿ ಮುಂಬೈನಲ್ಲಿ ಕಟ್ಟೆಚ್ಚರ ವಹಿಸಿರುವ ಪೊಲೀಸರು, ಜನವರಿ 2ರವರೆಗೆ ಕರ್ಫ್ಯೂ ಜಾರಿಗೊಳಿಸಿದ್ದಾರೆ. ಕ್ರಿಸ್ ಮಸ್, ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉಗ್ರರ ಚಟುವಟಿಕೆಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಮುಂಬೈ ನಗರದಲ್ಲಿ ಜನವರಿ 2ರವರೆಗೆ ಕರ್ಫ್ಯೂ ಜಾರಿಯಾಗಿದ್ದು, 5ಕ್ಕಿಂತ ಹೆಚ್ಚಿನ ಜನರು ಒಟ್ಟಾಗಿ ಓಡಾಡುವಂತಿಲ್ಲ. ಕ್ಲಬ್, ಸಹಕಾರ ಸಂಘಗಳು, ಇತರ ಸಂಘಟನೆಗಳ ಮೆರವಣಿಗೆ, ಪಟಾಕಿ, ಧ್ವನಿವರ್ಧಕಗಳು, ಬ್ಯಾಂಡ್, ವಾದ್ಯಗಳನ್ನು ನುಡಿಸುವಂತಿಲ್ಲ.ಮದುವೆ, ಸಭೆ-ಮಾರಂಭಗಳ ಮೇಲೆ ಪೊಲೀಸರು ನಿಗಾವಹಿಸಲಿದ್ದಾರೆ.
ಮುಂಬೈ ಪೊಲಿಸ್ ಕೇಂದ್ರ ಕಚೇರಿಯಿಂದ ಈ ಆದೇಶ ಹೊರಡಿಸಲಾಗಿದೆ. ಶಸ್ತ್ರಾಸ್ತ್ರಗಳು, ಬಂದೂಕು, ಕತ್ತಿ ಸೇರಿದಂತೆ ಇತರ ಆಯುಧಗಳೊಂದಿಗಿನ ಸಂಚಾರದ ಮೇಲೇ ನಿರ್ಬಂಧ ಹೇರಲಾಗಿದೆ.
ಮತದಾರರ ಪಟ್ಟಿ: ಅಲ್ಪಸಂಖ್ಯಾತ ಮತದಾರರನ್ನು ಕೈಬಿಟ್ಟಿಲ್ಲ : ಸಿಎಂ ಬೊಮ್ಮಾಯಿ
https://pragati.taskdun.com/voters-listdeletcm-basavaraj-bommaihubli/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ