ಪ್ರಗತಿವಾಹಿನಿ ಸುದ್ದಿ, ಮುಂಬೈ: ತನ್ನ ಲೈವ್ ಸ್ಟ್ರೀಂನಲ್ಲಿ ಇಬ್ಬರ ಚುಂಬನ ದಾಳಿಗೆ ತುತ್ತಾಗುತ್ತಿದ್ದ ಕೋರಿಯನ್ ಮಹಿಳಾ ಯೂಟ್ಯೂಬರ್ ಒಬ್ಬರನ್ನು ಮುಂಬಯಿಯ ವ್ಯಕ್ತಿಯೊಬ್ಬರು ರಕ್ಷಿಸಿದ್ದಾರೆ.
ಈ ಕುರಿತ ವಿಡಿಯೊ ಈಗ ಸಖತ್ ವೈರಲ್ ಆಗಿದೆ. ಗಿರೀಶ್ ಆಳ್ವ ಎಂಬ ಟ್ವಿಟರ್ ಬಳಕೆದಾರರು ಮಹಿಳೆಗೆ ಕಿರುಕುಳ ನೀಡಿದ ನಂತರ ಏನಾಯಿತು ಎಂಬುದನ್ನು ವೀಡಿಯೊ ರೆಕಾರ್ಡ್ ಮಾಡಿದ್ದಾರೆ.
ದಕ್ಷಿಣ ಕೊರಿಯಾದ ಮಹಿಳೆ ಪಾರ್ಕ್ ಹ್ಯೋ-ಜಿಯಾಂಗ್ ಲೈವ್ ಸ್ಟ್ರೀಂನಲ್ಲಿದ್ದರು. ಈ ವೇಳೆ ಆರೋಪಿಗಳಾದ ಮೊಬೀನ್ ಚಂದ್ ಮತ್ತು ಮೊಹಮ್ಮದ್ ನಕೀಬ್ ಆಕೆಯ ಕೈ ಹಿಡಿದು ಚುಂಬಿಸಲು ಪ್ರಯತ್ನಿಸಿದರು.
ಲೈವ್ ಸ್ಟ್ರೀಂ ಅನುಸರಿಸುತ್ತಿದ್ದ ಸ್ಥಳೀಯ ವ್ಯಕ್ತಿ ಅಥರ್ವ ತಿಕ್ಖಾಕೂಡಲೆ ಮಧ್ಯ ಪ್ರವೇಶಿಸಿ ಪಾರ್ಕ್ ಹ್ಯೋ- ಜಿಯಾಂಗ್ ಅವರನ್ನು ರಕ್ಷಿಸಿದ್ದಾರೆ. ಅವರು ಇಬ್ಬರು ಆರೋಪಿತರೊಂದಿಗೆ ಮಾತನಾಡಿ ಚುಂಬನ ದಾಳಿಯಿಂದ ರಕ್ಷಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇದಕ್ಕಾಗಿ ಅಥರ್ವ ಅವರಿಗೆ ಧನ್ಯವಾದ ಹೇಳಿದ ಪಾರ್ಕ್ ಹ್ಯೋ- ಜಿಯಾಂಗ್ “ಸದ್ಯ ಮುಂಬೈ ಸುರಕ್ಷಿತವಾಗಿದೆ” ಎಂದು ಉದ್ಗರಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಜಿಯಾಂಗ್ ಅವರು ಅಥರ್ವ ಅವರೊಂದಿಗೆ ಊಟ ಮಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರು ವ್ಯಕ್ತಿಗಳಿಂದ ಕಿರುಕುಳಕ್ಕೊಳಗಾಗುತ್ತಿದ್ದಾಗ ಆಕೆಯ ರಕ್ಷಣೆಗೆ ಬಂದವರಲ್ಲಿ ಆದಿತ್ಯ ಎಂಬುವವರು ಕೂಡ ಇದ್ದುದಾಗಿ ಅವರು ಹೇಳಿದ್ದಾರೆ.
ರೈಲಿಗೆ ಸಿಲುಕಿ ಎರಡೂ ಕಾಲುಗಳನ್ನು ಕಳೆದುಕೊಂಡ ತರಕಾರಿ ಮಾರಾಟಗಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ