Latest

ಟಿವಿ ಕಾರ್ಯನಿರ್ವಾಹಕನ ಜೀವಕ್ಕೇ ಮುಳುವಾಯಿತು ಕೂದಲು ಕಸಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕೂದಲು ಕಸಿ ದೆಹಲಿಯ ಟಿವಿ ಕಾರ್ಯನಿರ್ವಾಹಕರೊಬ್ಬರ ಜೀವಕ್ಕೇ ಮುಳುವಾಗಿದೆ.

ಅಥರ್ ರಶೀದ್ (30 ) ಮೃತಪಟ್ಟವರು. ದೆಹಲಿಯ ಕ್ಲಿನಿಕ್‌ನಲ್ಲಿ ಕೂದಲು ಕಸಿ ಮಾಡಿದ ನಂತರ ಶಸ್ತ್ರಚಿಕಿತ್ಸೆಯಲ್ಲಾದ ಪ್ರಮಾದದಿಂದ ಅವರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

ಟಿವಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ರಶೀದ್ ಅವರು ಕೂದಲು ಕಸಿ ಮಾಡಿಸಿಕೊಂಡ ನಂತರ ಸೆಪ್ಸಿಸ್ ಹೆಚ್ಚಿತು.  ಜೊತೆಗೆ ಅವರ ತಲೆಯಿಂದ ಊತ ಹರಡಲು ಪ್ರಾರಂಭಿಸಿತು. ಕೊನೆಗೆ ಕಿಡ್ನಿ ಸಹಿತ ಬಹುಅಂಗಾಂಗಗಳು ವಿಫಲವಾಗಿ ಅವರು ಮೃತಪಟ್ಟಿದ್ದಾರೆ.

ಸಾಮಾನ್ಯವಾಗಿ ಸಾವಿರಾರು ರೂ. ವೆಚ್ಚದ ಈ ವೈದ್ಯಕೀಯ ಪ್ರಕ್ರಿಯೆಗೆ ಅವರು ಸುಮಾರು 15 ಲಕ್ಷ ರೂ.ನಷ್ಟು ಖರ್ಚು ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

“ನನ್ನ ಮಗ ಬಹಳ ನೋವಿನಿಂದ ಮರಣಹೊಂದಿದ್ದಾನೆ. ಅವನ ಮೂತ್ರಪಿಂಡಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದವು ಮತ್ತು ನಂತರ ಅವನ ಎಲ್ಲಾ ಅಂಗಗಳು ವಿಫಲವಾದವು” ಎಂದು  ಅವರ 62 ವರ್ಷದ ತಾಯಿ ಆಸಿಯಾ ಬೇಗಂ ಹೇಳಿದ್ದಾರೆ.

ಜಗತ್ತಿನಾದ್ಯಂತ ಜನಪ್ರಿಯವಾಗುತ್ತಿರುವ ಕೂದಲು ಕಸಿಯಿಂದ ತಮ್ಮಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ತಮ್ಮ ಪುತ್ರ ಮುಂದಾಗಿದ್ದ ಎಂದು ಆಸಿಯಾ ಬೇಗಂ ಹೇಳಿದ್ದಾರೆ.

ಶಿರಾಳಕೊಪ್ಪದಲ್ಲಿ ನಿಷೇಧಿತ ಪಿಎಫ್ ಐ ಪರ ಗೋಡೆ ಬರಹ ವಿಚಾರ; ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button