ಪ್ರಗತಿವಾಹಿನಿ ಸುದ್ದಿ; ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ನಡೆಯುತ್ತಿದ್ದು, 8 ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಜಾಮಿಯಾ ಮಸಿದಿ ಬಳಿ ಬರುತ್ತಿದ್ದಂತೆ ಸಂಕೀರ್ತನಾ ಯಾತ್ರೆ ಪ್ರತಿಭಟನಾ ಸ್ವರೂಪ ಪಡೆದಿದೆ.
ಇಂದು ಬೆಳಿಗ್ಗೆ ಶ್ರೀರಂಗಪಟ್ಟಣದ ನಿಮಿಷಾಂಬಾ ದೇಗುಲದಿಂದ ಆರಂಭವಾದ ಸಂಕೀರ್ತನಾ ಯಾತ್ರೆ ಕೋಟೆ ಆಂಜನೇಯ ದೇವಾಲಯದವರೆ ತರಳಿ ಮುಕ್ತಾಯವಾಗಬೇಕಿತ್ತು. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ಬರುತ್ತಿದ್ದಂತೆ ಹನುಮಮಾಲಾಧಾರಿಗಳು ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ.
ಜಾಮಿಯಾ ಮಸೀದಿ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್ ಮೇಲೆ ಹತ್ತಿ ಮಸೀದಿ ಒಳಗೆ ನುಗ್ಗಲು ಸಾವಿರಾರು ಹನುಮ ಮಾಲಾಧಾರಿಗಳು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಹನುಮ ಮಾಲಾಧಾರಿಗಳನ್ನು ತಡೆದಿದ್ದಾರೆ. ಪೊಲೀಸರು ಹಾಗೂ ಹನುಮ ಮಾಲಾಧಾರಿಗಳ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಸಂಕೀರ್ತನಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಇನ್ನಷ್ಟು ಹನುಮ ಮಾಲಾಧಾರಿಗಳು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಮಸೀದಿ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಹನುಮ ಮಂದಿರ ಕೆಡವಿ ಜಾಮಿಯಾ ಮಸೀದಿ ನಿರ್ಮಾಣ ಮಾಡಲಾಗಿದೆ. ಮಸೀದಿ ಜಾಗದಲ್ಲಿ ಹನುಮ ಮಂದಿರ ಮರು ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ. ಕಟ್ಟುವೆವು ಕಟ್ಟುವೆವು ಹನುಮ ಮಂದಿರವ ಕಟ್ಟುವೆವು… ಅಲ್ಲಿ ರಾಮ ಮಂದಿರ ಇಲ್ಲಿ ಹನುಮ ಮಂದಿರ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಹನುಮ ಮಾಲಾಧಾರಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರನ ನಿರ್ಮಾಣವಾಗಿದೆ.
MLC ಕಾರು ಡಿಕ್ಕಿ; ಬೈಕ್ ಸವಾರ ಗಂಭೀರ; ನೀನ್ಯಾವ ಸೀಮೆ ಎಂಎಲ್ ಸಿ…ಸಾರ್ವಜನಿಕರ ಆಕ್ರೋಶ
https://pragati.taskdun.com/bjp-mlc-n-ravikumarcarbikeaccidentbike-rider-injuerdkolara/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ