Kannada NewsKarnataka News
ಮಾಜಿ ಸೈನಿಕರಿಗೆ ಸರ್ಕಾರದಿಂದ ಸೂಕ್ತ ಸ್ಥಾನಮಾನ ಸಿಗಲಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕದ ಉದ್ಘಾಟನೆ ಸಮಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶ ಕಾಯುವ ಕಾಯಕವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಮಾಜಿ ಸೈನಿಕರಿಗೆ ಸರ್ಕಾರದಿಂದ ಸೂಕ್ತ ಸ್ಥಾನ ಮಾನ ಸಿಗುವಂತಾಗಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಉದ್ಘಾಟಿಸಿ ಅವರು ಮಾತನಾಡಿ, ಈ ಸಂಘಟನೆಯ ಮುಖಾಂತರ ನಿವೃತ್ತ ಸೈನಿಕರ ಹಿತಕಾಯುವ ಕೆಲಸವಾಗಬೇಕು. ದೇಶದಲ್ಲಿ ಮಾಜಿ ಸೈನಿಕರು ಕೇವಲ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯುವಂತಾಗಬೇಕು ಎಂದು ಹೇಳಿದರು.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಉದ್ಘಾಟಿಸಿ ಅವರು ಮಾತನಾಡಿ, ಈ ಸಂಘಟನೆಯ ಮುಖಾಂತರ ನಿವೃತ್ತ ಸೈನಿಕರ ಹಿತಕಾಯುವ ಕೆಲಸವಾಗಬೇಕು. ದೇಶದಲ್ಲಿ ಮಾಜಿ ಸೈನಿಕರು ಕೇವಲ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯುವಂತಾಗಬೇಕು ಎಂದು ಹೇಳಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಜೀವನದಲ್ಲಿ ಅತ್ಯಂತ ಪವಿತ್ರವಾದ ದೇಶ ಕಾಯುವ ಕೆಲಸ ಮಾಡಿರುವ ಸೈನಿಕರು ಈಗ ನಿವೃತ್ತ ಜೀವನ ನಡೆಸುತ್ತಿದ್ದೀರಿ. ನಿಮ್ಮ ಸೇವೆಯನ್ನು ಸಮಾಜ ಮರೆಯಲು ಸಾಧ್ಯವಿಲ್ಲ. ನೀವು ಸದಾ ಎಚ್ಚರರಾಗಿದ್ದು ದೇಶದ ಜನರು ನೆಮ್ಮದಿಯಿಂದ ಬದುಕುವಂತೆ ಮಾಡಿದ್ದೀರಿ. ಈಗ ನಿಮಗೆ ಸರಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಕೊಡಿಸುವ ಮೂಲಕ ನೆಮ್ಮದಿಯನ್ನು ಕೊಡಿಸುವಲ್ಲಿ ಎಲ್ಲ ರೀತಿಯಿಂದ ಪ್ರಯತ್ನಿಸುತ್ತೇನೆ ಎಂದರು.ನನ್ನ ಕ್ಷೇತ್ರದಲ್ಲಿ ಸೈನಿಕರಿಗೆ ಅತೀ ಹೆಚ್ಚು ಗೌರವ ಸಿಗುವಂತೆ ಮಾಡಿದ್ದೇನೆ. ಮಾಜಿ ಸೈನಿಕ ಶಂಕರಗೌಡ ಪಾಟೀಲ ಅವರಿಗೆ ರಾಜಕೀಯ ಸ್ಥಾನಮಾನವನ್ನೂ ನೀಡಿದ್ದೇನೆ. ಜೀವನದಲ್ಲಿ ಶಿಸ್ತು ಮೈಗೂಡಿಸಿಕೊಂಡಿರುವ ನಿಮಗೆ ಎಲ್ಲ ರೀತಿಯ ಸೌಲಭ್ಯ, ಗೌರವ ಕೊಡಲು ನಾನು ಬದ್ದನಾಗಿದ್ದೇನೆ ಎಂದು ಅವರು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಚನ್ನರಾಜ ಹಟ್ಟಿಹೊಳಿ, ಖ್ಯಾತ ವಾದ್ಯ ಡಾ.ರವಿ ಪಾಟೀಲ, ಸಂಘದ ರಾಜ್ಯಾಧ್ಯಕ್ಷ ಡಾ. ಶಿವಣ್ಣ ಎನ್.ಕೆ, ಗೌರವ ಅಧ್ಯಕ್ಷ ನಾಗಪ್ಪ ಕಳಸನ್ನವರ, ಉಪಾಧ್ಯಕ್ಷ ವಿರೂಪಾಕ್ಷ ತಿಳಗಂಜಿ, ದಯಾನಂದ ಢಾಳಿ, ರಮೇಶ ಚೌಗುಲಾ, ಪ್ರಧಾನ ಕಾರ್ಯದರ್ಶಿ ಜಗದೀಶ ಪೂಜೇರಿ, ಕಾರ್ಯದರ್ಶಿ ಶಿವಬಸಪ್ಪ ಕಾಡನ್ನವರ ಸೇರಿದಂತೆ ಮಾಜಿ ಸೈನಿಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ