ಲುಡೋ ಆಟದಲ್ಲಿ ಸೋತು ಮನೆ ಮಾಲೀಕನಿಗೆ ತನ್ನನ್ನೇ ಅರ್ಪಿಸಿಕೊಂಡ ಮಹಿಳೆ

ಪ್ರಗತಿ ವಾಹಿನಿ ಸುದ್ದಿ, ಪ್ರತಾಪಗಡ:
ಉತ್ತರ ಪ್ರದೇಶದ ಪ್ರತಾಪಗಡದಲ್ಲಿ ಲುಡೋ ಆಟದ ಚಟಕ್ಕೆ ಬಿದ್ದಿದ್ದ ಮಹಿಳೆಯೊಬ್ಬಳು ಮನೆ ಮಾಲೀಕನ ಜತೆ ಆಟಕ್ಕೆ ತನ್ನನ್ನೇ ಪಣವಾಗಿಟ್ಟುಕೊಂಡಿದ್ದಳು. ಆಟದಲ್ಲಿ ಸೋತ ಬಳಿಕ ಮನೆ ಮಾಲೀಕನಿಗೆ ತನನ್ನು ಅರ್ಪಿಸಿಕೊಂಡಿದ್ದಾಳೆ.

ಮಹಿಳೆಯ ಪತಿ ಜೈಪುರದಲ್ಲಿ ಉದ್ಯೋಗಿಯಾಗಿದ್ದಾನೆ. ಆತ ಕಳುಹಿಸುತ್ತಿದ್ದ ಹಣದಲ್ಲಿ ಮಹಿಳೆ ಜೀವನ ಮಾಡುತ್ತಿದ್ದಳು. ಆದರೆ ಕಳೆದ ಕೆಲ ವರ್ಷಗಳಿಂದ ಲುಡೋ ಆಟದ ಚಟಕ್ಕೆ ದಾಸಳಾಗಿದ್ದಳು. ಹಾಗಾಗಿ ಗಂಡ ಕಳಿಸಿದ ಹಣವೆಲ್ಲ ಆಟಕ್ಕೆ ಖರ್ಚಾಗುತ್ತಿತ್ತು. ಹಣವಿಲ್ಲದಿದ್ದರೂ ಲುಡೋ ಆಟದ ಚಟ ಮಹಿಳೆಯಿಂದ ದೂರಾಗಿರಲಿಲ್ಲ.

Home add -Advt

ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ಇತ್ತೀಚೆಗೆ ಒಮ್ಮೆ ಮನೆಯ ಮಾಲೀಕನ ಜತೆ ಲುಡೋ ಆಟಕ್ಕೆ ತೊಡಗಿದಾಗ ಹಣವಿಲ್ಲದ ಕಾರಣ ತನ್ನನ್ನೇ ಪಣವಾಗಿಟ್ಟಿದ್ದಳು. ಆಟದಲ್ಲಿ ಸೋತ ಬಳಿಕ ಮಾಲೀಕನ ಜತೆಯೇ ವಾಸವಾಗಿದ್ದಾಳೆ ಎಂದು ಮಹಿಳೆಯ ಪತಿ ತಿಳಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಗುಜರಾತ್ ನಲ್ಲಿ ಮತ್ತೊಮ್ಮೆ ಬಿಜೆಪಿ ಜಯಭೇರಿ: ಎಕ್ಸಿಟ್ ಪೋಲ್

https://pragati.taskdun.com/bjp-to-win-gujarat-assemblyexit-polls-prediction/

ಮಹಿಳಾ ವೈದ್ಯಾಧಿಕಾರಿ ನಿಗೂಢ ಸಾವು

https://pragati.taskdun.com/lady-doctordeathchitradurga/

Related Articles

Back to top button