Kannada NewsLatest

ಬೆಳಗಾವಿ ನೀರು ಸರಬರಾಜು ವ್ಯವಸ್ಥೆ ಉನ್ನತೀಕರಣಕ್ಕೆ ಬೆನಕೆ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬೆಳಗಾವಿ ಉತ್ತರ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಶಾಸಕ ಅನಿಲ ಬೆನಕೆ ಬೆಂಗಳೂರಿನಲ್ಲಿ ಇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಎನ್ ಜಯರಾಮ್ ಅವರನ್ನು ಭೇಟಿ ಮಾಡಿದ್ದರು.  

 ಹಿಡಕಲ್ ಡ್ಯಾಂ ನಿಂದ ನಗರ ಪ್ರದೇಶದ ಬಸವನಕೊಳ್ಳ ಜಲಾಶಯಕ್ಕೆ ಈಗಿರುವ ನೀರಿನ ಸಾಮರ್ಥ್ಯವನ್ನು 12 ಎಮ್.ಜಿ.ಡಿಯಿಂದ 18 ಎಮ್.ಜಿ.ಡಿ ವರೆಗೆ ಹೆಚ್ಚಿಸಬೇಕು. ಹಿಡಕಲ್ ಡ್ಯಾಂ, ಕುಂದರಗಿ ಹಾಗೂ ತುಂಬರಗಟ್ಟಿ ಪ್ರದೇಶಗಳಲ್ಲಿ ನಿಗದಿತ ಅವಧಿಯಲ್ಲಿ ಹೊಸ ಪಂಪಿಂಗ್ ಮಷಿನ್  ಅಳವಡಿಸಬೇಕು ಎನ್ನುವ ಬೇಡಿಕೆಯನ್ನು ಶಾಸಕರು ಮುಂದಿಟ್ಟರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಯರಾಮ್, ಸುಮಾರು 22.28 ಕೋಟಿ ರೂ. ವೆಚ್ಚದಲ್ಲಿ ವಿಶಿಷ್ಠ ವಿನ್ಯಾಸದ  ಹೊಸ ಪಂಪಿಂಗ್ ಮಷಿನ್‌ನನ್ನು ಅಳವಡಿಸಲಾಗುತ್ತಿದೆ. ಇದರಿಂದ ನಗರದ ಸಾರ್ವಜನಿಕರಿಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲು ಸಹಾಯಕವಾಗಲಿದೆ  ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button