Kannada NewsLatest

ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯನ್ನೇ ಕೊಂದ

 

 

Home add -Advt

ಪ್ರಗತಿವಾಹಿನಿ ಸುದ್ದಿ, ಅಥಣಿ: 

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೋರ್ವ ಕೈ ಹಿಡಿದ ಮಡದಿಯನ್ನೇ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಕಿರಾತಕ ಪತಿ ತಾನೇ ಪೊಲೀಸ್ ಠಾಣೆಗೆ ಹೋಗಿ ಕಾಣೆಯಾಗಿದ್ದಾಳೆ ಎಂದು ದೂರನ್ನು ಸಹ ನೀಡಿದ್ದಾನೆ.
ಅಪ್ಪಾಸಾಹೇಬ್ ಸುರುಡೆ (42) ಬಂಧಿತ ಆರೋಪಿ. ಉಮಾಶ್ರೀ ಅಪ್ಪಾಸಾಹೇಬ್ ಸುರುಡೆ ಕೊಲೆಯಾದ ದುರ್ದೈವಿ. ಆರೋಪಿ ಅಪ್ಪಾಸಾಹೇಬ್​ ವಿಷ್ಣುವಾಡಿ ಬಳಿ ತನ್ನ ಹೆಂಡತಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಜೂನ್ 6 ರಿಂದ ಕಾಣೆಯಾಗಿದ್ದಾಳೆ ಎಂದು ಅಥಣಿ ಠಾಣೆಗೆ ದೂರು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಪ್ಪಾಸಾಹೇಬ್​ ತನ್ನ ಪತ್ನಿ ಉಮಾಶ್ರೀ ಸಹೋದರಿ ಜತೆಯಲ್ಲಿ ಅಕ್ರಮ‌ ಸಂಬಧ ಹೊಂದಿದ್ದ ಎನ್ನಲಾಗಿದೆ. ಹೆಂಡತಿ ಉಮಾಶ್ರೀ ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಾಳೆ. ತನ್ನ ತಂಗಿಯಿಂದ ದೂರ ಇರುವಂತೆ ಹೇಳಿದ್ದಾಳೆ. ಆದರೆ ಹೆಂಡತಿಯ ಮಾತು ಕೇಳುವ ಬದಲು ಆರೋಪಿ ಕೊಲೆ ಮಾಡಲು ನಿರ್ಧರಿಸಿದ್ದಾನೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಹೆಂಡತಿಯ ಕೊಲೆ ಮಾಡಿ ನಾಟಕ ಮಾಡಿದ್ಧಾನೆ.
ಆರೋಪಿ ನೀಡಿದ್ದ ದೂರನ್ನು ದಾಖಲಿಸಿಕೊಂಡ ಅಥಣಿ ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದರು. ಬಳಿಕ ಅಪ್ಪಾಸಾಹೇಬ್​ ನೇ ಹೆಂಡತಿಯ ಕೊಲೆ ಮಾಡಿದ್ಧಾನೆ ಎಂದು ಪೊಲೀಸರಿಗೆ ತಿಳಿದಿದೆ. ಅಥಣಿ ಪೊಲೀಸರು ಹೆಂಡತಿ ಕೊಂದ ಪಾಪಿ ಪತಿಯ ಹೆಡೆಮುರಿ ಕಟ್ಟಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button