Latest

ಚಾಮುಂಡೇಶ್ವರಿ ಬೆಟ್ಟಕ್ಕೆ ಶ್ರೀಶೈಲ ಜಗದ್ಗುರು ಶ್ರೀ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 
ಶ್ರೀಶೈಲದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮೈಸೂರಿನ ಸುಪ್ರಸಿದ್ಧ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಶೈಲದ ಜಗದ್ಗುರುಗಳು ಕರ್ನಾಟಕದ ಹೆಮ್ಮೆಯ ಕ್ಷೇತ್ರ ಮೈಸೂರು ಚಾಮುಂಡೇಶ್ವರಿಯ ಸುಕ್ಷೇತ್ರ. ಚಾಮುಂಡೇಶ್ವರಿ ಬೆಟ್ಟಕ್ಕೆ ಬಂದರೆ ಭಕ್ತಾದಿಗಳ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ ಇದೆ. ಅದೇ ರೀತಿಯಲ್ಲಿ ಚಾಮುಂಡೇಶ್ವರಿಯ ಕೃಪೆ ಇಡೀ ಕರ್ನಾಟಕಕ್ಕೆ ಅಷ್ಟೇ ಅಲ್ಲ, ಭಾರತಕ್ಕೆ ವಿಶ್ವಕ್ಕೆ ಇದೆ. ಇವತ್ತು ಸರಕಾರ ಶ್ರಮವಹಿಸಿ ಅದ್ಭುತ ಕಾರ್ಯವನ್ನು ಮಾಡುತ್ತಿದೆ. ಇಲ್ಲಿ ನಡೆಯುವ ಪೂಜಾಕೈಂಕರ್ಯಗಳು ಮತ್ತು ಶಿಸ್ತಿನಿಂದ ಎಲ್ಲರಿಗೂ ದರ್ಶನವನ್ನು ನೀಡುವ ವಿಶೇಷವಾಗಿರುವ ಕಾರ್ಯಕ್ಕೆ ಜಗದ್ಗುರುಗಳು ಸಂತೋಷವನ್ನು ವ್ಯಕ್ತಪಡಿಸಿದರು.
 ಇದೇ ಸಂದರ್ಭದಲ್ಲಿ ಜರುಗಿದ ಚಂಡಿಕಾಯಾಗದಲ್ಲಿ ಪಾಲ್ಗೊಂಡು ಜಗದ್ಗುರುಗಳು ಪೂರ್ಣಾವತಿಯನ್ನು ನೆರವೇರಿಸಿದರು.  ಶ್ರೀ ಕ್ಷೇತ್ರದ ವತಿಯಿಂದ ಆಡಳಿತ ಮಂಡಳಿ ಜಗದ್ಗುರುಗಳನ್ನು ಬರಮಾಡಿಕೊಂಡು ವಿಶೇಷ ಗೌರವವನ್ನು ಸಲ್ಲಿಸಿದರು.
 ಇದೇ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಭಾಗಿಯಾಗಿ, ದೇವಿಯ ಬಗ್ಗೆ ನಮಗೆ ಅಪಾರವಾದ ಗೌರವ, ಒಂದು ತಿಂಗಳು ಮೈಸೂರಿನಲ್ಲಿ ಅನುಷ್ಠಾನ ಮಾಡಿ ಅಲ್ಲಿ ಪ್ರತಿನಿತ್ಯ 6 ಗಂಟೆಗೆ ಚಾಮುಂಡೇಶ್ವರಿ ದರ್ಶನ ಪಡೆದಿರುವುದನ್ನು ಸ್ಮರಣಿ ಮಾಡಿದರು.
ಬೆಂಗಳೂರು ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭಾಗಿಯಾಗಿ ಚಾಮುಂಡೇಶ್ವರಿಯ ಕೃಪೆ ಇಡೀ ರಾಜ್ಯಕ್ಕೆ, ರಾಷ್ಟ್ರಕ್ಕೆ ಆಗಿ ಎಲ್ಲರೂ ಕೂಡ ವ್ಯವಸ್ಥಿತವಾಗಿ ಕಾರ್ಯವನ್ನು ನಿರ್ವಹಿಸಿ ದೇಶವನ್ನು ಮುನ್ನಡೆಸಲು ದೇವಿಯ ಕೃಪೆಯನ್ನು ಪಡೆಯಿರಿ ಎಂದರು.
 ಇದೇ ಸಂದರ್ಭದಲ್ಲಿ ಖ್ಯಾತ ಜ್ಯೋತಿಷಿ ರವಿಕುಮಾರ ಶಾಸ್ತ್ರಿಗಳು, ಮೂಗೂರು ಮಧು ದೀಕ್ಷಿತರು ಮತ್ತು ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರು ಕೂಡ ಇದರಲ್ಲಿ ಭಾಗಿಯಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button