ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ಸುತ್ತಲಿನ ಕೃಷಿ ಜಮೀನುಗಳಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಹೊಲಗದ್ದೆ, ತೋಟಗಳಿಗೆ ನುಗ್ಗಿ ವ್ಯಾಪಕ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದೆ.
4 ಮರಿಗಳನ್ನು ಒಳಗೊಂಡಂತೆ ಒಟ್ಟು 16 ಆನೆಗಳಿರುವ ಗಜಪಡೆ ಶುಕ್ರವಾರ
ರಾತ್ರಿ ದಾಂಡೇಲಿ ಅರಣ್ಯದಿಂದ ತಾವರಗಟ್ಟಿ, ಚುಂಚವಾಡ ಮಾರ್ಗವಾಗಿ ಭೂರಣಕಿ ಗ್ರಾಮದ ಕಡೆ ಆಗಮಿಸಿವೆ. ಮಧ್ಯರಾತ್ರಿಯಿಂದ ಶನಿವಾರ ನಸುಕಿನಜಾವದವರೆಗೆ ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ಹೊರವಲಯದ ಕೃಷಿ ಭೂಮಿಗಳಿಗೆ ಲಗ್ಗೆ ಇಟ್ಟಿವೆ. ಹೊಲದಲ್ಲಿದ್ದ ಕಬ್ಬು ತುಳಿದು ತಿಂದಿರುವ ಆನೆಗಳು ಬಳಿಕ ಭತ್ತದ ಜಮೀನುಗಳಿಗೆ ನುಗ್ಗಿ ರಾಶಿ ಮಾಡಲು ಸಂಗ್ರಹಿಸಿ ಇಟ್ಟಿದ್ದ ಭತ್ತದ ಬಣಿವೆಯನ್ನು ಕಿತ್ತು ತುಳಿದಿವೆ.
ಇದಲ್ಲದೆ ತೋಟಗಳಲ್ಲಿದ್ದ ಬಾಳೆ ಮತ್ತು ತೆಂಗಿನ ಗಿಡಗಳನ್ನು ಕಿತ್ತು ಹಾಕಿದ್ದು, ತೋಟಗಾರಿಕೆ ಬೆಳೆಗಳನ್ನೂ ನಾಶ ಮಾಡಿವೆ. ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ರೈತರಾದ ಹಣಮಂತ ಅಮರಾಪುರ, ತಿಮ್ಮಣ್ಣ ಅಮರಾಪುರ,
ರಾಮ ಅಮರಾಪುರ, ಮನೋಹರ ಪಾಟೀಲ, ಮುರಳಿಧರ ಪಾಟೀಲ, ಅರ್ಜುನ ವಡ್ಡರ, ಗುಡೂಸಾಬ್ ಸಾಹುಕಾರ, ಮಾರುತಿ ಪಾಟೀಲ, ಕಲ್ಲಪ್ಪ ಪಾಟೀಲ ಮತ್ತು ಇತರ ರೈತರಿಗೆ ಸೇರಿದ 30 ಎಕರೆ ಪ್ರದೇಶದಲ್ಲಿ ಕಾಡಾನೆಗಳು ಸುತ್ತಾಡಿ ಬೆಳೆಹಾನಿ ಮಾಡಿವೆ.
ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಶನಿವಾರ ಬೆಳಗ್ಗೆಯೇ ಮಾಹಿತಿ ನೀಡಿದ್ದಾರೆ. ಕೇವಲ ಅರಣ್ಯ ರಕ್ಷಕರೊಬ್ಬರು ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, 2 ದಿನ ಕಚೇರಿಗೆ ರಜೆ ಇರುವ ಕಾರಣ ಸೋಮವಾರ ಮತ್ತೆ ಬರುವುದಾಗಿ ಹೇಳಿಹೋಗಿದ್ದಾಗಿ ರೈತರು ತಿಳಿಸಿದ್ದಾರೆ. ಮೇಲಧಿಕಾರಿಗಳು ಯಾರೂ ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕೂಡಲೇ ಆನೆಗಳಿಂದ ಹಾನಿಗೀಡಾದ ಪ್ರದೇಶದ ಪರಿಶೀಲನೆ ನಡೆಸಬೇಕು ಮತ್ತು ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಭೂರಣಕಿ ಗ್ರಾಮದ ಮಹೇಶ ಪಾಟೀಲ, ಎಂ.ಎಂ ಸಾಹುಕಾರ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
*ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಕರ ಮತ್ತು ವಿಶ್ವವಿದ್ಯಾಲಯಗಳ ಸಮಸ್ಯೆ ನಿವಾರಣೆಗೆ ಅದತ್ಯೆ ನೀಡಿ: ಸರ್ಕಾರಕ್ಕೆ ಅರುಣ ಶಹಾಪೂರ ಒತ್ತಾಯ*
https://pragati.taskdun.com/aruna-shahapurabelagavi-sessionschool-colleges-problems/
*ನೀರು ತುಂಬಿದ್ದ ಬಕೇಟ್ ಗೆ ಬಿದ್ದು ಪುಟ್ಟ ಮಗು ದುರ್ಮರಣ*
https://pragati.taskdun.com/10-months-babydeathfall-in-backetdavanagere/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ