Kannada NewsKarnataka News
ಗ್ರಾಮೀಣ ಪ್ರದೇಶದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಗೆ ಪ್ರಯತ್ನ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಎಲ್ಲ ದೃಷ್ಟಿಯಿಂದ ಹಿಂದುಳಿದಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದಕ್ಕಾಗಿ ಕಳೆದ ನಾಲ್ಕೂವರೆ ವರ್ಷದಿಂದ ನಾನು ಪ್ರಥಮ ಆದ್ಯತೆಯ ಮೇಲೆ ಕೆಲಸ ಮಾಡುತ್ತಿದ್ದೇನೆ. ಹೇಣ್ಣು ಮಕ್ಕಳು ಸೇರಿದಂತೆ ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದೆನ್ನುವುದೇ ನನ್ನ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುವುದು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಭಾನುವಾರ, ಯಳ್ಳೂರಿನ ಶ್ರೀ ಚಾಂಗಳೇಶ್ವರಿ ಶಿಕ್ಷಣ ಮಂಡಳ ಹಾಗೂ ಶ್ರೀ ಚಾಂಗಳೇಶ್ವರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ ಸಂಸ್ಥೆಯೊಂದು ಸುವರ್ಣಮಹೋತ್ಸವ ಆಚರಿಸುತ್ತಿರುವುದು ಹಾಗೂ ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುತ್ತಿರುವುದು ನನ್ನ ಭಾಗ್ಯವೇ ಆಗಿದೆ. 50 ವರ್ಷಗಳ ಹಿಂದೆ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ಈ ಭಾಗದ ಸಾವಿರಾರು ಮಕ್ಕಳಿಗೆ ಶಿಕ್ಷಣವನ್ನು ನೀಡಿದ ಮಹನೀಯರನ್ನು ಸ್ಮರಿಸುವ ಸಂದರ್ಭ ಇದಾಗಿದೆ. ಜೊತೆಗೆ ಪವಿತ್ರವಾದ ಈ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಾವು ಹೊರಬೇಕಾಗಿದೆ ಎಂದು ಅವರು ಹೇಳಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಶ್ರೀ ಚಾಂಗಳೇಶ್ವರಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ವೈ ಎನ್ ಮಜುಕರ್, ಯುವರಾಜಣ್ಣ ಕದಂ, ಪ್ರಸಾದ ವೈ ಮಜುಕರ್, ದಿಗಂಬರ್ ಪಾಟೀಲ, ಆಬಾಸಾಹೇಬ್ ದಳ್ವಿ, ರಾವಜಿ ಪಾಟೀಲ, ಅಮೃತ ಶೋಲಾರ್, ಗುರುವರ್ಯ ನಂದಿಹಳ್ಳಿ, ಮಾಲೋಜಿರಾವ್ ಅಷ್ಟೇಕರ್, ಸತೀಶ ಪಾಟೀಲ ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೋವಾದಲ್ಲಿ ತೆರೆದುಕೊಂಡಿದೆ ಹೊಸ ಗೇಟ್ ವೇ
https://pragati.taskdun.com/a-new-gateway-will-open-in-goa/
https://pragati.taskdun.com/siddeshwara-swamijivijayapurajnanayogashrama/
ಅನುದಾನಿತ ಮಹಿಳಾ ಶಿಕ್ಷಣ ಸಂಸ್ಥೆಗಳ ಮಹಿಳಾ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ
https://pragati.taskdun.com/childcare-leave-facility-for-women-employees-of-aided-womens-educational-institutions/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ