Kannada NewsLatest
ಕರ್ನಾಟಕ/ ಕನ್ನಡದ ಇತಿಹಾಸ: ಪ್ರಧಾನಿ ನರೇಂದ್ರ ಮೋದಿಗೆ ಪತ್ರ; ಇದು ಕನ್ನಡಿಗರೆಲ್ಲ ತಿಳಿದುಕೊಳ್ಳಲೇಬೇಕಾದ ಮಾಹಿತಿ
ಹೀಗೆಲ್ಲ ಇರುವಾಗ ಬೆಳಗಾವಿಯನ್ನು ಕರ್ನಾಟಕದವರು ಕಸಿದುಕೊಂಡರು ಎಂದು ಮಹಾರಾಷ್ಟ್ರ ಹೇಳಿದರೆ ನಾವು ಸುಮ್ಮನೆ ಇರಬೇಕೇ ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವೈದ್ಯರೂ, ಸಾಮಾಜಿಕ ಕಾರ್ಯಕರ್ತರೂ, ಕನ್ನಡ ಹೋರಾಟಗಾರರೂ ಆಗಿರುವ ಡಾ.ವೀರೇಶ ಪಂಚಾಕ್ಷರಿಮಠ ಅವರು ಕರ್ನಾಟಕ- ಕನ್ನಡದ ಇತಿಹಾಸ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಪತ್ರವನ್ನು ಕಳುಹಿಸಿದ್ದಾರೆ. ಪತ್ರದ ಪೂರ್ಣ ಪಾಠ ಇಲ್ಲಿದೆ –
ಇಂದ :
ವೀರೇಶ್ ಪಂಚಾಕ್ಷರಿ ಮಠ
ಬೆಳಗಾವಿ
ಗೆ
ಶ್ರೀ ನರೇಂದ್ರ ಮೋದಿಜಿ
ಪ್ರಧಾನ ಮಂತ್ರಿಗಳು ಭಾರತ ಸರ್ಕಾರ
ದೆಹಲಿ
ವಿಷಯ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಕುರಿತು
ನಾನು ಈ ಒಂದು ಪತ್ರ ಬರೆಯಲು ಕಾರಣ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ತಮಗೆ ತಿಳಿದ ಹಾಗೆ ರಾಜ್ಯಗಳ ಭಾಷಾವಾರು ವಿಂಗಡಣೆಯಾದ ಬಳಿಕ ಮಹಾರಾಷ್ಟ್ರ ದೊಡ್ಡ ಹೋರಾಟ ನಡೆಸಿದ್ದರಿಂದ ಕೇಂದ್ರ ಸರ್ಕಾರ ಮಹಾಜನ ಆಯೋಗ ರಚಿಸಿತು. ದಿನಾಂಕ 25 ಆಗಸ್ಟ್ 1967 ರಂದು ಕೇಂದ್ರ ಗ್ರಹ ಇಲಾಖೆಗೆ ವರದಿ ಸಲ್ಲಿಕೆ ಆಯಿತು. ಆದರೆ ಇದನ್ನು ಮಹಾರಾಷ್ಟ್ರ ತಿರಸ್ಕರಿಸಿ ತನ್ನ ಉದ್ಧಟತನ ತೋರಿಸಿತು.
ಇದೆಲ್ಲವನ್ನು ಬಿಟ್ಟು ನಾನು ಕರ್ನಾಟಕದ ಇತಿಹಾಸ ಹಾಗೂ ಕರ್ನಾಟಕ ಮೊದಲು ಎಲ್ಲಿಯವರೆಗೆ ಇತ್ತು ಎಂಬುದನ್ನು ತಮಗೆ ತಿಳಿಸಲು ಬಯಸುತ್ತೇನೆ. ನಾನು ಬರೆದಿದ್ದನ್ನು ತಾವು ಇತಿಹಾಸದಿಂದ ಪರಿಶೀಲಿಸಬಹುದು ಹಾಗೂ ಗೂಗಲ್ ಮುಖಾಂತರ ಖಾತ್ರಿಪಡಿಸಿಕೊಳ್ಳಬಹುದು.
●ಇಂದಿನ ಮಹಾರಾಷ್ಟ್ರದ ಕೊಂಕಣ ಪ್ರದೇಶಗಳ ಮೇಲೆ ಕನ್ನಡದ ಮೊಟ್ಟಮೊದಲ ಸಾಮ್ರಾಟ ಆಗಿದ್ದ ಕದಂಬರು ಆಳ್ವಿಕೆ ಮಾಡುತ್ತಿದ್ದರು
●ನಂತರ ಬಾದಾಮಿಯನ್ನು ಕೇಂದ್ರವಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ ಚಾಲುಕ್ಯರು ಮಹಾರಾಷ್ಟ್ರವನ್ನು ದಾಟಿ ನರ್ಮದೇಯವರಿಗೂ ಮುಂದುವರೆದಿದ್ದರ
●ಇಂದಿನ ಪೂರ್ಣ ಮಹಾರಾಷ್ಟ್ರ ನಮ್ಮ ಕನ್ನಡದ ಚಾಲುಕ್ಯರ ಅಧೀನದಲ್ಲಿತ್ತು ನಂತರ ಈ ಭೂಮಿ ರಾಷ್ಟ್ರಕೂಟರ ಕೈವಶದಲ್ಲಿತ್ತು
●ರಾಷ್ಟ್ರಕೂಟ ಸಾಮ್ರಾಟ ಅಮೋಘ ವರ್ಷ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಗೆ ದಾನದತ್ತಿ ಕೊಟ್ಟರುವುದು ಹಾಗೂ ಆ ತಾಯಿಗಾಗಿ ತನ್ನ ಕೈಬೆರಳನ್ನು ಕತ್ತರಿಸಿ ಕೊಟ್ಟಿದ್ದು ಇತಿಹಾಸ.
●ಇಂದಿನ ಪ್ರಸಿದ್ಧ ಪಂಡರಪುರದ ದೇವಾಲಯವನ್ನು ಕಟ್ಟಿಸಿದ್ದು ಹೊಯ್ಸಳ ಅರಸ ವಿಷ್ಣುವರ್ಧನ ಎಂಬುದು ತಿಳಿಯಬೇಕು.
●ಅಜಂತಾ ಎಲ್ಲೋರಾ ಎಲಿಫೆಂಟಾ ರಾಷ್ಟ್ರಕೂಟರ ಕೊಡಿಗೆಡುಗಳಾಗಿರುವ ಬಗ್ಗೆ ಸಂಪೂರ್ಣ ಇತಿಹಾಸವೇ ಸಾಕ್ಷಿಯಾಗಿದೆ
●ಮಹಾರಾಷ್ಟ್ರದಲ್ಲಿನ ಪ್ರಸಿದ್ಧ ಬುಲೆಶ್ವರ ದೇವಾಲಯವನ್ನು ಕಟ್ಟಿಸಿದ್ದು ನಮ್ಮ ಕನ್ನಡದ ರಾಜ ಶ್ರೀ ಕೃಷ್ಣದೇವರಾಯ
●ದೋಪೀಶ್ವರ ದೇವಾಲಯವನ್ನು ಕಟ್ಟಿಸಿದ್ದು ನಮ್ಮ ಚಾಲುಕ್ಯರ ಎರಡನೇ ಪುಲಕೇಶಿ
●ಮಹಾರಾಷ್ಟ್ರವನ್ನು ಆಳಿದವರಲ್ಲಿ ನಮ್ಮ ಕರ್ನಾಟಕದ ಬಿಜಾಪುರ ಸುಲ್ತಾನರು ಸಹ ಒಬ್ಬರು.
●ಮಹಾರಾಷ್ಟ್ರದಲ್ಲಿ ನೂರಾರು ಕನ್ನಡ ಶಿಲಾಶಾಸನಗಳು ಇಂದಿಗೂ ಸಿಗುತ್ತಿರುವುದು ಮಹತ್ವ ಸಾಕ್ಷಿಯಾಗಿದೆ. ದಿನಾಂಕ 18 ಜುಲೈ 2022 ರಂದು ಸಾತಾರಾ ಜಿಲ್ಲೆಯ ಶ್ರೀಪಾಲವನ್ ಎಂಬ ಗ್ರಾಮದಲ್ಲಿ ಕನ್ನಡ ಶಿಲಾಶಾಸನ ಸಿಕ್ಕಿದೆ.
ಸುಮಾರು 2500 ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಹಾಗೂ ಕರ್ನಾಟಕವನ್ನು ಮಹಾರಾಷ್ಟ್ರ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. ಹೀಗೆಲ್ಲ ಇರುವಾಗ ಬೆಳಗಾವಿಯನ್ನು ಕರ್ನಾಟಕದವರು ಕಸಿದುಕೊಂಡರು ಎಂದು ಮಹಾರಾಷ್ಟ್ರ ಹೇಳಿದರೆ ನಾವು ಸುಮ್ಮನೆ ಇರಬೇಕೇ ?
ಕೊಲ್ಹಾಪುರ ಸೋಲ್ಹಾಪುರ ಜತ್ತ ಅಕ್ಕಲಕೋಟೆ ಭಾಗಗಳಲ್ಲಿ ನಮ್ಮ ಕನ್ನಡಿಗರದ್ದೇ ಪ್ರಾಬಲ್ಯವಿದೆ ಎಂದು ನಾವು ಅವರ ತಂಟೆಗೆ ಹೋಗುವುದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಭಾರತೀಯರು ಒಗ್ಗಟ್ಟಾಗಿರಬೇಕು. ನಮ್ಮ ನಮ್ಮಲ್ಲಿಯೇ ತಂಟೆಗಳು ನೆಲ ಜಲ ಭಾಷೆಯ ಕಾರಣ ಹೊಡೆದಾಟಗಳು ನಡೆದರೆ ಭಾರತೀಯತೆ ಎಂಬುದಕ್ಕೆ ಅರ್ಥವಿರುವುದಿಲ್ಲ.
ಲಾಭದ ದೃಷ್ಟಿಯಿಂದ ನಮ್ಮ ಬೆಳಗಾವಿ ಅಂತಹ ಸಮೃದ್ಧ ಪ್ರದೇಶದ ಮೇಲೆ ಕಣ್ಣು ಹಾಕುವುದಕ್ಕಿಂತ ಹೆಚ್ಚು ಬರಪೀಡಿತವಾಗಿರುವ ತಮ್ಮ ರಾಜ್ಯದ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದರೆ ಬಹಳ ಒಳ್ಳೆಯದು.
ಇಷ್ಟೆಲ್ಲಾ ವಿಷಯಗಳನ್ನು ಪರಿಶೀಲಿಸಿ ನೋಡಿ ತಾವುಗಳು ಮಹಾರಾಷ್ಟ್ರದ ರಾಜಕಾರಣಿಗಳಿಗೆ ತಿಳಿ ಹೇಳಿದರೆ ಒಳ್ಳೆಯದು ಹಾಗೂ ಮಹಾರಾಷ್ಟ್ರ ಇನ್ನು ಮುಂದಾದರೂ ಗಡಿ ವಿಷಯವನ್ನು ಕೆದಕುವುದನ್ನು ಬಿಟ್ಟು ತನ್ನ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡಲಿ ಹಾಗೂ ಕರ್ನಾಟಕದ ಜೊತೆ ಒಳ್ಳೆಯ ಸಂಬಂಧವನ್ನು ಹೊಂದಲಿ ಎಂದು ಆಶಿಸುತ್ತೇನೆ.
https://pragati.taskdun.com/i-dont-tollerate-if-mlaministers-absent-for-session/
https://pragati.taskdun.com/mangaloresi-suteshsuspended/
https://pragati.taskdun.com/karnatakacold-windrainbreathing-problemminister-sudhakarwarning/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ