ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣೆಗೆ ಪೂರ್ವದಲ್ಲಿ ಕ್ಷೇತ್ರದ ಜನತೆಗೆ ನೀಡಿದ ಭರವಸೆಯನ್ನು ಆತ್ಮಸಾಕ್ಷಿಯಾಗಿ ನಿಭಾಯಿಸಿದ್ದು, ನಾಲ್ಕುವರೆ ವರ್ಷಗಳಲ್ಲಿ ಐತಿಹಾಸಿಕ ಅಭಿವೃದ್ಧಿ ನಡೆದಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಮಾರಿಹಾಳ ಗ್ರಾಮದಲ್ಲಿ ಅವರು ಅರಿಷಿಣ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಈ ಸಮಯದಲ್ಲಿ ಮಾರಿಹಾಳ ಗ್ರಾಮದ ಎಲ್ಲ ಅಭಿವೃದ್ಧಿಯ ಕೆಲಸಗಳನ್ನು ಮೆಲುಕು ಹಾಕುತ್ತ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಅವರು, “ಚುನಾವಣೆಯ ಪೂರ್ವದಲ್ಲಿ ತಾವು 5 ವರ್ಷಗಳ ಅಧಿಕಾರ ಭಾಗ್ಯವನ್ನು ಕರುಣಿಸಿರಿ ಎಂದು ಕೋರುವಾಗ 25 ವರ್ಷಗಳ ಅಭಿವೃದ್ಧಿಯನ್ನು ಕೇವಲ 5 ವರ್ಷಗಳಲ್ಲಿ ಮಾಡಿ ತೋರಿಸುವುದಾಗಿ ಇದೇ ಗ್ರಾಮದಲ್ಲಿ ಪಣ ತೊಡಲಾಗಿತ್ತು. ಅದರ ಪ್ರಕಾರ ಬೆಳಗಾವಿ ಗ್ರಾಮೀಣ ಕ್ಷೇತ್ರ ಇತಿಹಾಸದಲ್ಲೇ ಎಂದೂ ಕಾಣದಂಥ ಅಭಿವೃದ್ಧಿ ಕೆಲಸಗಳನ್ನು ಕೇವಲ ನಾಲ್ಕೂವರೆ ವರ್ಷಗಳಲ್ಲಿ ಕಂಡಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬಸವರಾಜ ಹಿತ್ತಲಮನಿ, ರಾಮಚಂದ್ರ ಚೌಹಾಣ, ಅಪ್ಪಾಸಾಬ ಬಾಗವಾನ, ನಾರಾಯಣ ಸೊಗಲಿ, ಕಲ್ಲಪ್ಪ ಸೀತಿಮನಿ, ಬಸವರಾಜ ಮ್ಯಾಗೋಟಿ, ಪ್ರಕಾಶ ಯಲ್ಲಪ್ಪನವರ, ಅನಂತ ಸಾಳುಂಕೆ, ಮಂಜುನಾಥ ಹೊನ್ನಪ್ಪನವರ, ಚಿನ್ಮಯ ಯಲ್ಲಪ್ಪನವರ, ವಿಠ್ಠಲ ಮಲ್ಲಾರಿ, ಗೌಡಪ್ಪ ಪಾಟೀಲ, ಮುದಕಪ್ಪ ನಾಯಕ್, ರಮೇಶ ಯಲ್ಲಪ್ಪನವರ, ಅಶೋಕ ಚನ್ನಣ್ಣವರ, ಎಂ.ಬಿ. ಉಪ್ಪಿನ್, ಈರಣ್ಣ ಪಾಟೀಲ, ಗುರು ಅಕ್ಕತಂಗೇರಹಾಳ, ಸಮೀರ ಮುಲ್ಲಾ, ಗ್ರಾಮದ ಸಾವಿರಾರು ಮಹಿಳೆಯರು, ಮಾರಿಹಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು, ಪಿಕೆಪಿಎಸ್ ನ ಎಲ್ಲ ಪದಾಧಿಕಾರಿಗಳು, ಆಪ್ತ ಸಹಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಗಡಿ ಮಾತುಕತೆ: ಅಮಿತ್ ಶಾ ಎದುರು ಮಣಿಯದಿರಲು ಮುಖ್ಯಮಂತ್ರಿಗೆ ಸಲಹೆ
https://pragati.taskdun.com/border-talks-advice-to-chief-minister-not-to-give-in-to-amit-shah/
*ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಕಾರಣ: ಸಿಎಂ ಬಸವರಾಜ ಬೊಮ್ಮಾಯಿ*
https://pragati.taskdun.com/mahadai-issuecm-basavaraj-bommaireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ