ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಾಲಿವುಡ್ ನ ‘ಸಾಥಿಯಾ’ ಚಿತ್ರದ ಸೆಟ್‌ನಲ್ಲಿ ತಾವು ನಟ ಶಾರೂಖ್ ಖಾನ್ ಅವರನ್ನು ಭೇಟಿಯಾದಾಗ ಅಲ್ಲಿನ ದೃಶ್ಯ ಹೇಗಿತ್ತು ಎಂಬುದನ್ನು ನಟ ವಿವೇಕ್ ಒಬೇರಾಯ್ ಹೇಳಿಕೊಂಡಿದ್ದಾರೆ.
ಬಾಲಿವುಡ್ ಹಂಗಾಮಾದ ಸಂದರ್ಶನದಲ್ಲಿ ವಿವೇಕ್ ಅವರು ಶಾರೂಖ್ ‘ಧೂಮದರ್ಶನ’ದ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.
ತಾವು ಭೇಟಿ ನೀಡಿದ ವೇಳೆ ಶಾರೂಖ್ ತಮ್ಮ ವ್ಯಾನಿಟಿ ವ್ಯಾನ್ ನಲ್ಲಿ ಕೂತಿದ್ದರಂತೆ. “ನಾನು ಅವರ ವ್ಯಾನಿಟಿ ವ್ಯಾನ್‌ಗೆ ಕಾಲಿಟ್ಟಾಗ, ಖಂಡಾಲಾದ ಕಾರ್ಮೋಡಗಳ ಮಧ್ಯೆ ಕಾಲಿಟ್ಟಂತೆ ಭಾಸವಾಯಿತು. ಇಡೀ ವ್ಯಾನಿಟಿ ವ್ಯಾನ್ ಸಿಗರೇಟ್ ಹೊಗೆಯಿಂದ ತುಂಬಿತ್ತು,” ಎಂದು ಅನುಭವ ಹಂಚಿಕೊಂಡಿದ್ದಾರೆ.
ಹೊಗೆಯಲ್ಲಿ ಶಾರೂಖ್ ಕಂಡುಬಂದ ರೀತಿಯನ್ನೂ ವಿವರಿಸಿರುವ ಅವರು, “ಅವರ ಹೊಗೆಯ ಮೂಲಕ, ನಾನು ನಿಗೂಢವಾದ ಸೂಪರ್‌ಸ್ಟಾರ್ ಅನ್ನು ನೋಡಿದೆ” ಎಂದೂ ಹೇಳಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ