ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಾಯಿ, ಮಗಳು ಹಾಗೂ ಮಗ ಸೇರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.
70 ವರ್ಷದ ಯಸೋಧಾ, 41 ವರ್ಷದ ಸುಮನ್ ಹಾಗೂ 36 ವರ್ಷದ ನರೇಶ್ ಗುಪ್ತಾ ಮೃತರು. ಮೆಲ್ನೋಟಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂದಿರುವ ಶಂಕೆ ವ್ಯಕ್ತವಾಗಿದೆ.
ಮೃತ ಯಶೋಧಾಗೆ ಮೂವರು ಮಕ್ಕಳು. ಈ ಪೈಕಿ ಒಬ್ಬ ಮಗಳು ಅಡ್ವಕೆಟ್ ಆಗಿದ್ದು, ಮದುವೆಯಾಗಿ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಾಗಿದ್ದಾಳೆ. ಮಗ ನರೇಶ್ ಹಾಗೂ ಇನ್ನೋರ್ವ ಮಗಳು ಸುಮನ್ ತಾಯಿಯ ಜೊತೆ ವಾಸವಾಗಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಯಸೋಧಾ ಪತಿ ಸಾವನ್ನಪ್ಪಿದ್ದರು. ಆದರೆ ಇದೀಗ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನರೇಶ್ ವೃತ್ತಿಯಲ್ಲಿ ಕಾಂಟ್ರ್ಯಾಕ್ಟರ್ ಆಗಿದ್ದ. ಹಲವು ಬಾರಿ ಸಂಬಂಧಿಕರು ಹಾಗೂ ಇನ್ನೋರ್ವ ಮಗಳು ಫೋನ್ ಮಾಡಿದರೂ ರಿಸೀವ್ ಮಾಡುತ್ತಿರಲಿಲ್ಲ. ಇದರಿಂದ ಮಗಳು ಮನೆ ಬಳಿ ಬಂದು ನೋಡಿದ್ದಾಗ ಮನೆಯ ಹೊಗಡೆ ಕಾರು ನಿಂತಿತ್ತು. ಮನೆ ಒಳಗಡೆ ನೋಡಿದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ತಕ್ಷಣ ಎರಡನೇ ಮಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಗು ಎತ್ತಿಕೊಂಡೇ ಸದನದ ಕಲಾಪಕ್ಕೆ ಬಂದ ಶಾಸಕಿ!
https://pragati.taskdun.com/the-mla-who-came-to-the-session-of-the-house-with-the-baby-picked-up/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ