ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ನಿವಾರಿಸಲು ನವಲಿ ಬಳಿ ನಿರ್ಮಿಸಲಾಗುವ ಜಲಾಶಯ ಕುರಿತಂತೆ ಶೀಘ್ರವೇ ಸರ್ವ ಪಕ್ಷಗಳ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್‍ನಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಳ್ಳಾರಿಯ ಎಂ.ವೈ. ಸತೀಶ ಅವರ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಾಜೋಳ ಉತ್ತರ ನೀಡದ ಬಳಿಕ ಮತ್ತಷ್ಟು ವಿವರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತುಂಗಭದ್ರಾ ಜಲಾಶಯ ಕರ್ನಾಟಕ, ಆಂದ್ರ ಮತ್ತು ತೆಲಂಗಾಣ ರಾಜ್ಯಕ್ಕೆ ಸಂಬಂಧಿಸದ್ದಾಗಿದ್ದು, ತುಂಗಭದ್ರ ಜಲಾಶಯದ ಹೂಳಿನಿಂದ 33 ಟಿ.ಎಂ.ಸಿ ನೀರು ಕೊರತೆ ಇದ್ದು, ಅದನ್ನು ಬಳಸಿಕೊಳ್ಳಲು ಗಂಗಾವತಿ ತಾಲೂಕಿನ ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಆಂದ್ರ ಪ್ರದೇಶದ ಮುಖ್ಯಮಂತ್ರಿ ಜೊತೆ ಅನೌಪಚಾರಿಕವಾಗಿ ಎರೆಡು ಬಾರಿ ಚರ್ಚೆ ಮಾಡಿದ್ದೇನೆ. ಈ ಹಿನ್ನಲೆಯಲ್ಲಿ ಆಂದ್ರ ಪ್ರದೇಶದ ನೀರಾವರಿ ಇಲಾಖೆ ಅಧಿಕಾರಿಗಳ ತಂಡ ರಾಜ್ಯ ಆಗಮಿಸಿ ನಮ್ಮ ರಾಜ್ಯದ ಅಧಿಕಾರಿಗೊಳೊಂದಿಗೆ ಚರ್ಚೆ ನಡೆಸಿದೆ ಎಂದರು. ಆದರೆ ಆಂದ್ರ ಪ್ರದೇಶ ತನ್ನ ಹಳೆಯ ಬೇಡಿಕೆಯನ್ನು ಇಟ್ಟಿದೆ. ಈ ಕಾರಣಕ್ಕಾಗಿ ಈ ವಿಷಯದ ಬಗ್ಗೆ ರಾಜ್ಯ ಅಚಿತಿಮ ನಿರ್ದಾರ ತೆಗೆದುಕೊಳ್ಳುವ ಮುನ್ನ ಸರ್ವ ಪಕ್ಷಗಳ ಸಭೆ ಕರೆದು ಬಳಿಕ ನಿರ್ಧಾರ ಮಾಡಲಿದೆ ಎಂದರು.
ತುಂಗಭದ್ರಾ ಜಲಾಶಯದಲ್ಲಿ ಹಲವು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಹೂಳು ಶೇಖರಣೆಯಾಗುತ್ತಿದೆ. ಈ ಹೂಳು ಘನೀಕರಣಗೊಂಡು ಕಲ್ಲಾಗಿ ಮಾರ್ಪಾಡಾಗಿದೆ. ಹೈಡ್ರೋಲಿಕ್ ಡ್ಯಾಜರ್‍ಗಳಿಂದಲೂ ಹೂಳೆತ್ತಲು ಸಾಧ್ಯವಾಗುತ್ತಿಲ್ಲ. ಸಮಾನಾಂತರ ಜಲಾಶಯ ನಿರ್ಮಿಸುವುದೇ ಇದಕ್ಕೆ ಪರಿಹಾರವಾಗಿದೆ. ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಈಗಾಗಲೇ ಆಯವ್ಯಯದಲ್ಲಿ 1 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. 1340 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಯೂ ಸಿದ್ಧವಾಗಿದೆ. ತುಂಗಭಧಾ ಮಂಡಳಿಯು ಮೂರು ರಾಜ್ಯಗಳಿಗೆ ಸಂಬಂಧಿಸಿದೆ. ಜಲಾಶಯ ನಿರ್ಮಾಣಕ್ಕೆ ಮಂಡಳಿಯ ಅನುಮೋದನೆಯೂ ಅಗತ್ಯವಿದೆ.ನ್ಯಾ.ಬ್ರಿಜೇಶ್‍ಕುಮಾರ್ ಮಿಶ್ರಾ ವರದಿಯಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರಿನ ಪ್ರಮಾಣದ ಮಾನದಂಡದ ಆಧಾರದಲ್ಲಿ ನೀರಿನ ಸಂಪೂರ್ಣವಾಗಿ ಬಳಕೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸಮಾನಾಂತರ ಜಲಾಶಯ ಯೋಜನೆ ವರದಿಯು ಪರಿಶೀಲನೆಯಲ್ಲಿದೆ. ನವಲಿ ಸಮಾನಾಂತರ ಜಲಾಶಯ ಯೋಜನೆಯನ್ನು ಕಾರ್ಯಗತಗೊಳಿಸುವ ಕುರಿತು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ, ಅವರುಗಳ ಸಹಕಾರ ಅನುಮೋದನೆಯೊಂದಿಗೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು.
ಅಂತಾರಾಜ್ಯ ಯೋಜನೆಯಾಗಿರುವ ತುಂಗಭದ್ರಾ ಯೋಜನೆಯಡಿ ನ್ಯಾಯಾಧೀಕರಣದಿಂದ ಒಟ್ಟು 230 ಟಿಎಂಸಿ ನೀರಿನ ಹಂಚಿಕೆಯಾಗಿದ್ದು, ಇದರಲ್ಲಿ 18 ಟಿಎಂಸಿ ಆವಿಯಾಗುವಿಕೆ ಪುಮಾಣವೂ ಸೇರಿರುತ್ತದೆ. ತುಂಗಭದ್ರಾ ಯೋಜನೆಯಡಿ ರಾಜ್ಯಕ್ಕೆ 138.99 ಟಿಎಂಸಿ ಮತ್ತು ಅವಿಭಜಿತ ಆಂಧ್ರಪ್ರದೇಶಕ್ಕೆ 73.01 ಟಿಎಂಸಿ ನೀರಿನ ಹಂಚಿಕೆ ಆಗಿರುತ್ತದೆ. ತುಂಗಭದ್ರಾ ಜಲಾಶಯದ ವಾರ್ಷಿಕ ಸರಾಸರಿ (1976- 77ರಿಂದ 2019-20) ನೀರಿನ ಬಳಕೆ 174 ಟಿ.ಎಂ.ಸಿ. ಇದ್ದು ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಜಲಾಶಯದ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
https://pragati.taskdun.com/yadagiritamtam-vehicletractoraccidenttwo-death/
*ಹುಬ್ಬಳ್ಳಿ ಕಿಮ್ಸ್ ರೀತಿಯಲ್ಲಿ ಕೆಲಸ ಮಾಡಿ: ಬಿಮ್ಸ್ ಸಿಬ್ಬಂದಿಗೆ ಪಾಠ ಮಾಡಿದ ಸಿಎಂ ಬೊಮ್ಮಾಯಿ*
https://pragati.taskdun.com/work-like-hubballi-kims-cm-bommai-teaches-bims-staff/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ