ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಹರಿವರಾಸನಂ ಶತಮಾನೋತ್ಸವ, ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಭಜನೆ, ಮಹಾಪ್ರಸಾದ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ರಾಷ್ಟ್ರೀಯ ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ್ ಮಾತನಾಡಿ ‘ಹರಿವರಾಸನಂ ಅಷ್ಟಕಂ’ ಹಾಡು ಎಂದು ಕರೆಯಲ್ಪಡುವ ಹಾಡು ಬರೆದವರು ಕೋಣಕತ್ ಜಾನಕೀ ಅಮ್ಮ ಅವರು. ನೂರು ವರ್ಷದ ಈ ಹಿಂದೆ ಈ ಹಾಡನ್ನು ಅಯ್ಯಪ್ಪನಿಗಾಗಿ 1924 ರಲ್ಲಿ ರಚಿಸಿ ಹಾಡಿದ್ದರು. ಜಾನಕೀ ಅಮ್ಮ ಅವರ ಮೊಮ್ಮಗ ಮೋಹನಕುಮಾರ ಹರಿವರಾಸಣಂ ಶತಮಾನೋತ್ಸವ ಪ್ರಚಾರ ಸಮಿತಿ ಅಡಿಯಲ್ಲಿ ವಿಶ್ವಾದ್ಯಂತ ಹರಿವರಾಸಂ ಹಾಗೂ ಅಯ್ಯಪ್ಪಸ್ವಾಮಿ ಧರ್ಮದ ಮಹಿಮೆಯನ್ನು ಪ್ರಸಾರ ಮಾಡುವ ಸಂಕಲ್ಪವನ್ನು ತೊಟ್ಟಿದ್ದಾರೆ. 2024 ಜನೆವರಿಯಲ್ಲಿ ಜಾಗತಿಕ ಅಯ್ಯಪ್ಪ ಸಂಗಮಮ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಈಗ ಈ ಹಾಡನ್ನು ಪ್ರಸಿದ್ಧ ಗಾಯಕ ಡಾ. ಯೇಸುದಾಸ ಅವರು ಈ ಹಾಡು ಹಾಡಿದ ಮೇಲೆ ಖ್ಯಾತಿ ಬಂತು. ಈಗ ಇದೇ ಹಾಡನ್ನು ಅಯ್ಯಪ್ಪನ ಪೂಜೆಯ ಬಾಗಿಲು ಮುಚ್ಚುವ ಮುಂಚೆ ರಾತ್ರಿ 11 ಗಂಟೆಗೆ ಕೊನೆಗೆ ಹಾಡುವುದು ವಾಡಿಕೆ ಎಂದರು.
ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ ಗುರೂಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯಾಧ್ಯಕ್ಷ ಡಾ.ಎನ್ ಜಯರಾಮ ಮಾತನಾಡಿ, ಬೆಳಗಾವಿಯಲ್ಲಿ ಇಂತಹ ಅದ್ಭುತ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಸಂಘಟನೆಯನ್ನು ಬೆಳಗಾವಿ ಜಿಲ್ಲೆಯಾದ್ಯಂತ ಸಂಘಟಿಸಿ ಅಲ್ಲಲ್ಲಿ ಅನ್ನದಾನ ಸ್ವಚ್ಛತಾ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದರು. ಶ್ರೀ ಕೃಷ್ಣ ಗುರುಸ್ವಾಮಿ, ಶ್ರೀ ಸುರೇಂದ್ರ ಗುರುಸ್ವಾಮಿ, ಜಿಲ್ಲಾ ಅಧ್ಯಕ್ಷರು ಆದ ಶ್ರೀ ಮಾನು ರಾಠೋಡ್ ಉಪಾಧ್ಯಕ್ಷರು ಶ್ರೀ ಸೋಮು ಗುರುಸ್ವಾಮಿ,ಮಹಾಲಿಂಗ ಗುರುಸ್ವಾಮಿ, ಶ್ರೀ ಜಗದೀಶ್ ಭೋಸ್ಕಿ ಗುರುಸ್ವಾಮಿ, ಶ್ರೀ ಸುಧಾಕರ್ ಶೆಟ್ಟಿ ಗುರುಸ್ವಾಮಿ ಸಂಕೇಶ್ವರ್, ಶ್ರೀ ಮಹದೇವ್ ಗುರುಸ್ವಾಮಿ, ಶ್ರೀ ಆನಂದ ಗುರುಸ್ವಾಮಿ, ಶ್ರೀ ಸುರೇಶ್ ಗುರುಸ್ವಾಮಿ, ಶ್ರೀ ಸುನೀಲ್ ಗುರುಸ್ವಾಮಿ, ಶ್ರೀ ಪ್ರಕಾಶ ಗುರುಸ್ವಾಮಿ, ಶ್ರೀ ಸಿದ್ದು ಗುರುಸ್ವಾಮಿ, ಶ್ರೀ ರಾಜು ಗುರುಸ್ವಾಮಿ ಶ್ರೀ ಮಾರುತಿ ಗುರುಸ್ವಾಮಿ ಕಡೆಬಜಾರ್, ಶ್ರೀ ಕಾಕತಿ ಗುರುಸ್ವಾಮಿ ಶ್ರೀ ರಾಮತಿರ್ತ್ ಗುರುಸ್ವಾಮಿ, ಶ್ರೀ ಅಶೋಕ ಹಂಜಿ ಗುರುಸ್ವಾಮಿ ಕಿತ್ತೂರು, ದೇಗಾಂವ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ, ಮುನವಳ್ಳಿ, ಯರಗಟ್ಟಿ , ಗೋಕಾಕ, ಹುಕ್ಕೇರಿ, ಚಿಕ್ಕೋಡಿ ಹಳ್ಳಿಹಳ್ಳಿಗಳಿಂದಗುರುಸ್ವಾಮಿಗಳು ಮಾಲಾಧಾರಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ