ಪ್ರಗತಿವಾಹಿನಿ ಸುದ್ದಿ; ಮುಂಬೈ: ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ, ವಿಚಿತ್ರ ಬಟ್ಟೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಅವರಿಗೆ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಗೊರೇಗಾಂವ್ ಪೊಲೀಸರು ಬಂಧಿಸಿದ್ದಾರೆ. ತನಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದ ಆರೋಪಿಯ ನರ ಕಟ್ ಮಾಡುವಂತೆ ಉರ್ಫಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನವೀನ್ ಗಿರಿ ಎಂಬಾತ ಉರ್ಫಿ ಜಾವೇದ್ ಗೆ ವಾಟ್ಸಪ್ ಮೂಲಕ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಆರೋಪಿ ನವೀನ್ ನನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಸೆಕ್ಷನ್ 354, 509, 506 ಹಾಗೂ 353 (ಡಿ)ಪ್ರಕರಣ ದಾಖಲಿಸಿದ್ದಾರೆ.
ತನಗೆ ಬೆದರಿಕೆ ಹಾಕಿದ್ದ ನವೀನ್ ಗಿರಿ ಎಂಬಾತನ ನರ ಕಟ್ ಮಾಡಿ, ಬೀದಿಗೆ ಬಿಸಾಕಿ ಎಂದು ಉರ್ಫಿ ಜಾವೇದ್ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಈ ನಡುವೆ ಎರಡು ದಿನಗಳ ಹಿಂದಷ್ಟೆ ಉರ್ಫಿ ಜಾವೇದ್ ಅವರನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುಬೈನಲ್ಲಿ ಸಾರ್ವಜನಿಕವಾಗಿ ಅಶ್ಲೀಲ ಉಡುಪಿನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ಆರೋಪದಲ್ಲಿ ಯುಎಇ ಪೊಲೀಸರು ಉರ್ಫಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕಿರುತೆರೆ ನಟಿ ಉರ್ಫಿ ಜಾವೇದ್ ಗೆ ರೇಪ್ ಆ್ಯಂಡ್ ಮರ್ಡರ್ ಬೆದರಿಕೆ; ಆರೋಪಿ ಬಂಧನ
https://pragati.taskdun.com/tv-actress-urfi-javed-threatened-with-rape-and-murder-accused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ