Latest

*ಬಿ.ಎಸ್.ಯಡಿಯೂರಪ್ಪ ಕಲ್ಯಾಣ ಮಂಟಪದ ಭೂಮಿ ಪೂಜೆ ನೆರವೇರಿಸಿದ ಮಾಜಿ ಸಿಎಂ ಯಡಿಯೂರಪ್ಪ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: “ಭಾರತದ ಭವಿಷ್ಯ ಪ್ರಮುಖವಾಗಿ ದೇಶದ ರೈತಾಪಿ ವರ್ಗದ ಮೇಲಿದೆ. ಚಿನ್ನವಿಲ್ಲದಿದ್ದರೆ ಬದುಕಬಹುದು, ಆದರೆ ಅನ್ನವಿಲ್ಲದೆ ಒಂದು ಕ್ಷಣ ಬದುಕೋದು ಕಷ್ಟ. ಜಗದ ಜನರಿಗೆಲ್ಲ ಅನ್ನ ನೀಡುವ ಭೂಮಿ ತಾಯಿಯ ಚೊಚ್ಚಲ ಮಗ ಕಷ್ಟದಲ್ಲಿರಬಾರದು” ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕರೆ ನೀಡಿದರು.

ಬೆಳಗಾವಿ ತಾಲೂಕಿನ ಗದ್ದಿಕರವಿನ ಕೊಪ್ಪ ಕ್ರಾಸ್,( ಚಿಕ್ಕ ಬಾಗೇವಾಡಿ) ಹೊರವಲಯದಲ್ಲಿ ಕಣಬರಗಿಯ ಗುರು ರೋಡ್-ಲೈನ್ಸ್ ಸಂಸ್ಥಾಪಕ ಗುರುದೇವ ಪಾಟೀಲ ಅವರು ನಿರ್ಮಿಸುತ್ತಿರುವ ನೂತನ ‘ಶ್ರೀ ಬಿ. ಎಸ್. ಯಡಿಯೂರಪ್ಪ ಕಲ್ಯಾಣ ಮಂಟಪ’ ದ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ” ಒಬ್ಬ ರೈತನ ಮಗನಾಗಿ ಹುಟ್ಟಿ ಕೃಷಿಯೊಂದಿಗೆ ಸಮಾಜ ಸೇವೆ ಮಾಡುತ್ತಲೇ ರಾಜಕಾರಣಕ್ಕೆ ಬಂದರೆ ರೈತ ಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಬಹುದು. ಆ ಕಾರಣಕ್ಕಾಗಿಯೇ ರೈತರಿಗಾಗಿ ಕೃಷಿ ಬಜೆಟ್ ಪ್ರತ್ಯೇಕವಾಗಿ ಮಂಡಿಸಿ ರೈತರ ನೋವುಗಳಿಗೆ ಸ್ಪಂದಿಸಿದ್ದೇನೆ. ಭವಿಷ್ಯದಲ್ಲಿ ಕೃಷಿಕರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಸರ್ಕಾರದ ಎಲ್ಲ ಯೋಜನೆಗಳು ತಲುಪಿದರೆ ತಮ್ಮ ಬದುಕು ಸಾರ್ಥಕವಾಗುತ್ತದೆ. ಗ್ರಾಮೀಣ ಭಾಗದ ರೈತರು ಹಾಗೂ ಬಡ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಗುರುದೇವ ಪಾಟೀಲ ಕುಟುಂಬ ನನ್ನ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಬಿ. ಎಸ್. ಯಡಿಯೂರಪ್ಪ ಕಲ್ಯಾಣ ಮಂಟಪ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಪ್ರತಿವರ್ಷ ಇಪ್ಪತ್ತೊಂದು ಜೋಡಿ ಸಾಮೂಹಿಕ ವಿವಾಹ ಮಾಡಬೇಕೆನ್ನುವ ಅವರ ಕನಸು ನನಸಾಗಲಿ. ಅದರೊಂದಿಗೆ ಗ್ರಾಮೀಣ ಯುವಕರಿಗೆ ಸ್ವ ಉದ್ಯೋಗದ ಕಾರ್ಯಾಗಾರ ಏರ್ಪಡಿಸುವ ಮೂಲಕ ಸ್ವಾವಲಂಬಿ ಭಾರತ ನಿರ್ಮಿಸಬೇಕೆನ್ನುವ ಅವರ ಕಾರ್ಯ ಯಶಸ್ವಿಯಾಗಲಿ. ಇಂಥ ಕಾರ್ಯ ನನ್ನ ಹೆಸರಿನಲ್ಲಿ ರೂಪಗೊಳ್ಳುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವುಕರಾದ ಅವರು ಗುರುದೇವ ಪಾಟೀಲ ಇಡೀ ಕುಟುಂಬವನ್ನು ಅಭಿನಂದಿಸಿದರು.”

ಕಾರ್ಯಕ್ರಮದಲ್ಲಿ ಗುರು ರೋಡ್-ಲೈನ್ಸ್ ಸಂಸ್ಥಾಪಕ ಗುರುದೇವ ಪಾಟೀಲ ಮಾತನಾಡಿ, ” ತಾವು ನಡೆದು ಬಂದ ಕಷ್ಟದ ದಾರಿ ವಿವರಿಸಿದರ ಅವರು, ಯಡಿಯೂರಪ್ಪ ಅವರ ಮೇಲಿನ ಅಭಿಮಾನದಿಂದ ಇಪ್ಪತ್ತೆರಡು ವರ್ಷಗಳ ಹಿಂದೆ ಬೆಳಗಾವಿಯ ಸರ್ಕಿಟ್ ಹೌಸನಲ್ಲಿ ಅವರನ್ನು ಭೇಟಿಯಾಗಲು ಹೋದಾಗ ಅಲ್ಲಿನ ಜನ ಅವಕಾಶ ಕೊಡಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿ ಯಡಿಯೂರಪ್ಪ ಅವರನ್ನೇ ಆಹ್ವಾನಿಸಿ ಅವರ ಹೆಸರಿನಲ್ಲಿ ಸಮಾಜ ಕಾರ್ಯ ಮಾಡಬೇಕೆಂದು ನಿರ್ಧರಿಸಿದ್ದೆ. ಅದು ಇಂದು ನನಸಾಗಿರುವುದು ಜೀವನದಲ್ಲಿ ಸುವರ್ಣಾಕ್ಷರಗಳಲ್ಲಿ ಇಡಬಹುದಾದ ಕ್ಷಣವಾಗಿದೆ. ಪ್ರತಿ ವರ್ಷ ಯಡಿಯೂರಪ್ಪ ಅವರ ಹೆಸರಿನಲ್ಲಿ ಇಪ್ಪತ್ತೊಂದು ಬಡ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ಮಾಡುವುದಾಗಿ ಘೋಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚನ್ನಮ್ಮನ ಕಿತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಅವರು, ” ತಮ್ಮ ಇಡೀ ಕ್ಷೇತ್ರ ರೈತಾಪಿ ಕುಟುಂಬಗಳಿAದ ಕೂಡಿದ್ದು ಅವರ ಆಶೀರ್ವಾದವೇ ನನ್ನ ಶಕ್ತಿಯಾಗಿದೆ. ಅಂಥ ಜನರ ಋಣ ತೀರಿಸಲು ನಿರಂತರ ಶ್ರಮಿಸುವುದಾಗಿ ಹೇಳಿ, ತಮ್ಮ ಕ್ಷೇತ್ರದಲ್ಲಿ ರೈತ ನಾಯಕ, ಮುತ್ಸದ್ದಿ ರಾಜಕಾರಣಿ ಯಡಿಯೂರಪ್ಪ ಅವರ ಹೆಸರಿನಲ್ಲಿ ಕಲ್ಯಾಣ ಮಂಟಪ ಆಗುತ್ತಿರುವುದು ಸಂತಸ ತಂದಿದೆ, ” ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಬೆಳಗಾವಿ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು, “ಯಡಿಯೂರಪ್ಪನವರು ರೈತ ಚಳುವಳಿಯಿಂದ ಬೆಳೆದು ಮುಖ್ಯಮಂತ್ರಿಯಾದವರು. ಸದಾ ಸಮಾಜಮುಖಿ ಚಿಂತನೆ ಹೊಂದಿರುವ ಅವರು ದೀನ, ದಲಿತರ, ಬಡ ಕಾರ್ಮಿಕರ ನೋವುಗಳಿಗೆ ಮಿಡಿದ ಸರ್ವಧರ್ಮದವರನ್ನು ಒಟ್ಟಿಗೆ ಕರೆದೊಯ್ಯಬಲ್ಲ ನಾಯಕರಾಗಿದ್ದಾರೆ. ಅವರ ಮೇಲಿನ ಅಭಿಮಾನದಿಂದ ಗುರುದೇವ ಪಾಟೀಲ ಅವರು ತಮ್ಮ ಸ್ನೇಹಿತರಾದ ಸುರೇಶ ಯಾದವ, ಮುಕ್ತಾರ ಪಠಾಣ ಮುಂತಾದವರ ಸಹಕಾರದಿಂದ ಕೊರೋನಾ ಲಾಕ್-ಡೌನ್ ಕಾಲದಲ್ಲಿ ಬಡಜನರಿಗೆ ಅನ್ನ, ಅರಿವೆ, ಔಷಧಿ ನೀಡಿ ನಿಜವಾದ ಸಮಾಜಸೇವೆ ಮಾಡಿದವರು. ಸಮಾಜಮುಖಿ ನಾಯಕರಾದ ಯಡಿಯೂರಪ್ಪ ಅವರ ಹೋರಾಟದ ಬದುಕು ಈ ಭಾಗದ ಯುವಜನರಿಗೆ ಆದರ್ಶವಾಗಲಿ ಎಂಬ ಆಶಯದಿಂದ ಕಲ್ಯಾಣ ಮಂಟಪ ನಿರ್ಮಿಸುತ್ತಿರುವುದು ಶ್ಲಾಘಣೀಯ” ಎಂದರು.

ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಮಹಾಸ್ವಾಮಿಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬೈಲಹೊಂಗಲ ಮೂರೂಸಾವಿರ ಮಠದ ನೀಲಕಂಠ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಚನ ಗುರುದೇವ ಪಾಟೀಲ, ಕಸ್ತೂರಿ ನಿಂಗನಗೌಡ ಪಾಟೀಲ, ಶಂಕರಗೌಡ ಪಾಟೀಲ, ಜಗದೀಶ ಮೆಟಗುಡ, ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ, ವಿರೂಪಾಕ್ಷಪ್ಪ ಯಮಕನಮರಡಿ, ಶಿವಲಿಂಗಯ್ಯ ಗಣಾಚಾರಿ, ಅರುಣ ಜೋರಾಪುರೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುಕ್ತಾರ ಪಠಾಣ ಸ್ವಾಗತಿಸಿ ಪರಿಚಯಿಸಿದರು. ಪ್ರಾಸ್ತವಿಕವಾಗಿ ರಾಘವೇಂದ್ರ ಪಾಟೀಲ ಮಾತನಾಡಿದರು. ಗಿರಿಯಾಲದ ಸಾಹಿತಿ ಡಾ. ಅಡಿವೆಪ್ಪ ಇಟಗಿ ಕಾರ್ಯಕ್ರಮ ನಿರ್ವಹಿಸಿದರು. ಬೆಳಗಾವಿಯ ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷ ಸುರೇಶ ಯಾದವ ವಂದಿಸಿದರು. ಸಮಾರಂಭ ಮುಗಿದ ನಂತರ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಯಿತು.

*ಗಡಿಯಲ್ಲಿ ಭೀಕರ ದುರಂತ; ಕಂದಕಕ್ಕೆ ಉರುಳಿದ ಸೇನಾ ವಾಹನ; 16 ಯೋಧರ ದುರ್ಮರಣ*

 

https://pragati.taskdun.com/16-army-jawans-killedvehicle-falls-into-gorgesikkimindia-china-border/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button