ಪ್ರಗತಿವಾಹಿನಿ ಸುದ್ದಿ; ತುಮಕೂರು: ಕೊರೊನಾ ಒಮಿಕ್ರಾನ್ ರೂಪಾಂತರಿ BF.7 ವೈರಸ್ ಚೀನಾ, ಜಪಾನ್ ಸೇರಿದಂತೆ ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಭಾರತಕ್ಕೂ ಶೀಘ್ರದಲ್ಲಿ ಕಾಲಿಡುವ ಆತಂಕವಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಕೋವಿಡ್ ನ ಹೊಸ ತಳಿಯೊಂದು ಚೀನಾ ಸೇರಿದಂತೆ ಹಲವೆಡೆ ಪತ್ತೆಉಆಗಿದೆ. BF.7 ಎಂಬ ವೈರಸ್ ಬಹಳ ವೇಗವಾಗಿ ವ್ಯಾಪಕವಾಗಿ ಹರಡುತ್ತಿದೆ. ಇನ್ನು 2-3 ತಿಂಗಳಲ್ಲಿ ಇಲ್ಲಿಗೂ ಎಂಟ್ರಿ ಕೊಡಬಹುದು. ಪ್ರತಿಯೊಬ್ಬರೂ ಜಾಗೃತೆ ವಹಿಸಿ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಹೇಳಿದರು.
ರಾಜ್ಯ ಸರ್ಕಾರ ಕೋವಿಡ್ ತಡೆಗಟ್ಟಲು ಎಲ್ಲಾ ಮುಂಜಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಾಸ್ಕ್, ಬೂಸ್ಟರ್ ಡೋಸ್ ವಿಚಾರದಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ಸಲಹೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯೊಂದಿಗೂ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.
ಕೋವಿಡ್ ನಿಯಂತ್ರಣ ಹಾಗೂ ಮಾರ್ಗಸೂಚಿ ವಿಚಾರವಾಗಿ ಸೋಮವಾರ ಬೆಳಗಾವಿ ಅಧಿವೇಶನದಲ್ಲಿಯೇ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಒಟ್ಟಾರೆ ಚಳಿಗಾಲವಿರುವುದರಿಂದ ನೆಗಡಿ, ಕೆಮ್ಮು ಸರ್ವೇಸಾಮಾನ್ಯ ಇಂತಹ ಹೊತ್ತಲ್ಲಿ ರೂಪಾಂತರಿ ವೈರಸ್ ಭೀತಿ ಎದುರಾಗಿದೆ. ಒಂದೆಡೆ ಕ್ರಿಸ್ ಮಸ್, ಹೊಸ ವರ್ಷಾಚರಣೆ ಸಡಗರ, ಸಂಕ್ರಾಂತಿ ಹಬ್ಬ ಬೆನ್ನಲ್ಲೇ ಕೊರೊನಾ ಹೊಸ ಅವತಾರ ರಾಜ್ಯದಲ್ಲಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದು, ಮತ್ತೆ ಸರಣಿ ಸಾವಿನ ಆ ದಿನಗಳು ಮರುಕಳಿಸಲಿದೆಯೇ ಎಂಬ ಆತಂಕ ಎದುರಾಗಿದೆ.
*ಈ 5 ದೇಶದ ಪ್ರಯಾಣಿಕರಿಗೆ RT-PCR ಕಡ್ಡಾಯ; ಮತ್ತೆ ಕ್ವಾರಂಟೈನ್ ರೂಲ್ಸ್ ಸುಳಿವು ನೀಡಿದ ಸಚಿವರು*
https://pragati.taskdun.com/bf-7-viruscorona-virusinternational-travelersrt-pcr-testmandatory/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ