Kannada NewsKarnataka NewsLatest

ಶರಣರ ವಚನಗಳಲ್ಲಿ ವೈಜ್ಞಾನಿಕ ಹಿನ್ನೆಲೆಯಿದೆ: ರತ್ನಾ ಬೆಣಚಮರ್ಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶರಣರ ವಚನಗಳಲ್ಲಿ ತಾತ್ವಿಕತೆ, ವೈಚಾರಿಕತೆ, ಸಾಮಾಜಿಕ ಚಿಂತನೆ, ಮಾನವನ ಸಂಕಷ್ಟಗಳಿಗೆ ಪರಿಹಾರ ಸೂತ್ರಗಳ ಜೊತೆಗೆ ವೈಜ್ಞಾನಿಕ ಹಿನ್ನೆಲೆಯ ಹಲವಾರು ವಚನಗಳನ್ನು ನಾವು ಕಾಣಬಹುದು. ಎಂದು ರತ್ನಾ ಬೆಣಚಮರ್ಡಿ ಇಂದಿಲ್ಲಿ ಹೇಳಿದರು.

ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮಾಸಿಕ ಶರಣ ಸತ್ಸಂಗ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಖಗೋಳ ವಿಜ್ಞಾನ ವಿಷಯದ ಕುರಿತಾಗಿ ಅವರು ಉಪನ್ಯಾಸ ನೀಡಿದರು.

ಶರಣರ ವಚನಗಳಲ್ಲಿ ವೈದ್ಯವಿಜ್ಞಾನ, ಜೀವವಿಜ್ಞಾನ, ಗಣಿತವಿಜ್ಞಾನ, ಖಗೋಳ ವಿಜ್ಣಾನದ ಮೇಲೆ ಬೆಳಕು ಚೆಲ್ಲುವ ಅನೇಕ ವಚನಗಳನ್ನು ನಾವು ನೋಡಬಹುದಾಗಿದೆ. ಹದಿನೈದನೆಯ ಶತಮಾನದಿಂದೀಚೆ ಖಗೋಳ ಶಾಸ್ತ್ರದ ಕುರಿತು ಸಂಶೋಧನೆ ಮಾಡಲಾಗಿದೆ. ಎಂದು ಹೇಳಿದರು.

ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಡಾ. ಅಲ್ಲಮಪ್ರಭು ಸ್ವಾಮಿಗಳು, ಇಂದಿನ ಯುವಕರಿಗೆ ಸಂಸ್ಕಾರ ಪಾಠ ಮಾಡುವುದು ತಾಯಂದಿರ ಹೊಣೆಗಾರಿಕೆ. ಇಂದು ಶರಣ ಸಂಸ್ಕೃತಿ ಉಳಿದಿದ್ದರೆ ಅದರ ಬಹುಪಾಲು ಶ್ರೇಯಸ್ಸು ಮಹಿಳೆಯರಿಗೆ ಸಲ್ಲುತ್ತದೆ. ಎಂದು ಹೇಳಿದ ಅವರು ಯುವಕರ ಗಮನವನ್ನು ಶರಣ ಸಂಸ್ಕೃತಿಯ ಕಡೆಗೆ ಸೆಳೆಯಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶರಣ ಬಸವರಾಜ ರೊಟ್ಟಿಯವರು ಫೆಬ್ರುವರಿಯಲ್ಲಿ ಬೀದರದಲ್ಲಿ ಹಮ್ಮಿಕೊಂಡಿರುವ ಲಿಂಗಾಯತ ಮಹಾ ಸಮ್ಮೇಳನವನ್ನು ಯಶಸ್ವಿಗೊಳ್ಳಲು ಎಲ್ಲರ ಸಹಾಯ ಸಹಕಾರ ಅತ್ಯವಶ್ಯ. ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸಬೇಕಿದೆ ಎಂದರು.

ಶಿಕ್ಷಕ ಮಹಾಂತೇಶ ತೋರಣಗಟ್ಟಿಯವರ ಸಂಪಾದಿತ ಕೃತಿ “ವಚನ ಜ್ಯೋತಿ” ಹಾಗೂ ಡಾ. ಅಡಿವೆಪ್ಪ ಇಟ್ಟಿ ಅವರು ರಚಿಸಿದ “ಚಂದ್ರ ಬಿಂದು” ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ರಾಜ್ಯ ಮಟ್ಟದ ಅಬ್ಯಾಕಸ್ ಗಣಿತ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಶ್ಲೋಕ ವಿಲಾಸ ಅಥಣಿಮಠ, ರಾಜ್ಯ ಮಟ್ಟದ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದ ಪ್ರಿಯಾ ಶೆಟ್ಟರ ಹಾಗೂ ಪ್ರೀತಮ್ ಶೆಟ್ಟರ ಅಲ್ಲದೇ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಇದರ ಪ್ರಾಯೋಜಕತ್ವವನ್ನು ಕಿಡ್ನಿ ತಜ್ಞ ವೈದ್ಯ ಡಾ. ನಂದೀಶ ರೊಟ್ಟಿ ಅವರು ವಹಿಸಿಕೊಂಡಿದ್ದರು.

ಶಂಕರ ಗುಡಸ್, ಡಾ. ರವಿ ಪಾಟೀಲ ವೇದಿಕೆಯಲ್ಲಿದ್ದರು. ಮಹಾಂತೇಶ ತೋರಣಗಟ್ಟಿ ಅವರು ಸ್ವಾಗತಿಸಿದರು. ಚಂದ್ರಪ್ಪ ಬೂದಿಹಾಳ ವಂದಿಸಿದರು. ಅಶೋಕ ಮಳಗಲಿ ನಿರೂಪಿಸಿದರು.

ಭಾರತ್‌ ಜೋಡೋ ಯಾತ್ರೆ ನಿಲ್ಲಿಸಲು ಬಿಜೆಪಿ ಮತ್ತೆ ಕೊರೊನಾ ಹೆಸರು ಬಳಕೆ: ಸತೀಶ್ ಜಾರಕಿಹೊಳಿ

https://pragati.taskdun.com/bjp-used-corona-name-again-to-stop-bharat-jodo-yatra-satish-jarakiholi/

ಸರಕಾರಿ ನೌಕರರ ಮೊದಲ ಆದ್ಯತೆ ವೇತನ ಆಯೋಗ ರಚನೆ

https://pragati.taskdun.com/the-first-priority-of-government-employees-is-the-formation-of-a-pay-commission/

ಷಡಕ್ಷರಿ ವಿರುದ್ಧ ಸಿಡಿದೆದ್ದ NPS ನೌಕರರು; ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆ

https://pragati.taskdun.com/nps-employees-who-lashed-out-against-shadakshari-there-was-an-uproar-on-social-media/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button