Kannada NewsKarnataka NewsLatest

10 ಸಾವಿರ ಕ್ವಾರಿ, ಕ್ರಷರ್ ಮಾಲೀಕರು, ಸಿಬ್ಬಂದಿ, ಕೂಲಿಕಾರ್ಮಿರಿಂದ ಬೆಳಗಾವಿ ಸುವರ್ಣಸೌಧದ ಎದುರು ಬೃಹತ್ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಕ್ವಾರಿ ಘಟಕಗಳು, ಕ್ರಷರ್ ಘಟಕಗಳು, ಲಾರಿಗಳು, ಟ್ರ್ಯಾಕ್ಟರ್‌ಗಳು, ಆರ್.ಎಂ.ಸಿ ಕಾಂಕ್ರೀಟ್ ಘಟಕಗಳು, ಟಾರ್ ಘಟಕಗಳು, ಹಾಲೋ ಬ್ಲಾಕ್ -ಮೋನೋ ಬ್ಲಾಕ್ ಘಟಕಗಳು ಎಲ್ಲವೂ ಬಂದ್ ಮಾಡಿ ಬೆಳಗಾವಿಯ ಸುವರ್ಣಸೌಧದ ‘ಬಸ್ತವಾಡ ಟೆಂಟ್ ನಂ.9 ರಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರು ಹಾಗೂ ಸಂಬಂಧಿಸಿದ ಎಲ್ಲಾ ಸಚಿವರು ನಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು. ಸಮಸ್ಯೆ ನಿವಾರಣೆಯಾಗದೇ ಹೋದರೆ ಅನಿರ್ಧಿಷ್ಟಾವಧಿ ಗಣಿಗಾರಿಕೆ ಸ್ವಗಿತಗೊಳಿಸಿ, ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರಕ್ಕೆ ಈಗಾಗಲೇ ರಾಜಧನ ಸಂದಾಯವಾಗಿರುವುದರಿಂದ ಮತ್ತೆ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ. ಇದನ್ನು ಮಾಡಬಾರದು. ಸರ್ಕಾರ ಕಳೆದ 40 ವರ್ಷಗಳಿಂದ ತ್ವರಿತವಾಗಿ ಕಾಮಗಾರಿ ನಿರ್ವಹಿಸುವ ದೃಷ್ಠಿಯಿಂದ ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಪಾವತಿಸಿಕೊಂಡು ಬಂದಿರುತ್ತಾರೆ. ಸರ್ಕಾರಕ್ಕೆ ಸಂದಾಯವಾಗತಕ್ಕ ರಾಜಧನ ಈಗಾಗಲೇ ಸಂದಾಯವಾಗಿರುತ್ತದೆ. ಆದ್ದರಿಂದ ಮತ್ತೆ ಗಣಿಗುತ್ತಿಗೆದಾರಿಂದ ವಸೂಲಿ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸುವುದಕ್ಕೆ ಪೂರಕವಾಗಿ ನಿಯಮಗಳು ಸಮರ್ಪಕವಾಗಿಲ್ಲ. ಆದ್ದರಿಂದ ನಿಯಮಗಳ ಸಮಗ್ರ ತಿದ್ದುಪಡಿಯ ಅಗತ್ಯವಿದೆ ೆಂದು ಪ್ರತಿಭಟನಾಕಾರರು ಸರಕಾರದ ಗಮನ ಸೆಳೆದರು.

ಸಂಘಟನೆಯ ಅಧ್ಯಕ್ಷ  ರವೀಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್‌ ಗೌರವಾಧ್ಯಕ್ಷ  ಡಿ.ಸಿದ್ದರಾಜು, ಉಪಾಧ್ಯಕ್ಷ  ಕಿರಣ್ ರಾಜ್ ಬಿ. ಆರ್. ರವಿ. ಬಿ. ಎನ್ ಶ್ರೀನಿವಾಸ್‌  ಉಪಾಧ್ಯಕ್ಷ  ಸಿ.ಎಸ್ ಭಾಸ್ಕರ್ , ಚಿಕ್ಕಬಳ್ಳಾಪುರ ಅಧ್ಯಕ್ಷ  ನಾಗರಾಜು, ಉಪಾಧ್ಯಕ್ಷ  ಮಧುಕುಮಾರ್‌ ಸೇರಿದಂತೆ  10ಸಾವಿರ ಮಾಲೀಕರು,ಸಿಬ್ಬಂದಿಗಳು, ಕೂಲಿಕಾರ್ಮಿಕರ ಜೊತೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಚಿವರು, ಶಾಸಕರ ಭೇಟಿ, ಭರವಸೆ:

ಪ್ರತಿಭಟನಾ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಹಾಲಪ್ಪ ಅಚಾರ್ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರು ಭೇಟಿ ನೀಡಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು.

ಸಚಿವರು ಮಾತನಾಡಿ, ಸಂಘದ ಬೇಡಿಕೆಗಳಳಿಗೆ ಸಂಬಂದಿಸಿದಂತೆ ಹಲವಾರು ಸಭೆಗಳನ್ನು ಕಳೆದ 6 ತಿಂಗಳಿಂದ ಮಾಡಲಾಗಿದೆ. ಬೇಡಿಕೆಗಳನ್ನು ಈಡೇರಿಸಲು ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದೆ ಎಂದರು.

ಸಚಿವರಾದ ಆರ್.ಅಶೋಕ್, ಸಿ.ಸಿ.ಪಾಟೀಲ್ ಮಾಧುಸ್ವಾಮಿ ಅವರ ಜೊತೆಯಲ್ಲಿ ಸಭೆಗಳನ್ನು ಮಾಡಲಾಗಿದೆ. ಉಪಸಮಿತಿಯಿಂದ ಕರಡುಪ್ರತಿ ಕ್ಯಾಬಿನೆಟ್ ಆನುಮೋದನೆಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಗಮನಕ್ಕೂ ತರಲಾಗಿದೆ ಎಂದರು.

ಕ್ವಾರಿ,ಕ್ರಷರ್ ಮಾಲೀಕರು ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ನಿಯಮ ತರಲಾಗುವುದು. ಸಾರ್ವಜನಿಕರು ಮತ್ತು ಸರ್ಕಾರಕ್ಕೆ ಬಂದ್ ಮಾಡಿರುವುದರಿಂದ ತೊಂದರೆಯಾಗಿದೆ. ಬಂದ್ ಹಿಂಪಡೆದು ಕ್ವಾರಿ, ಕ್ರಷರ್ ಮರು ಚಾಲನೆ ನೀಡಿ ಎಂದು ಮನವಿ ಮಾಡಿದರು.

ಕೆ.ಎಸ್.ಈಶ್ವರಪ್ಪ ಮಾತನಾಡಿ, ಕ್ವಾರಿ, ಕ್ರಷರ್ ಉದ್ಯಮ ಇರುವುದರಿಂದ ಸೇತುವೆ, ರಸ್ತೆ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗಿದೆ.  ಸಮಸ್ಯೆ ನಿವಾರಣೆಗಾಗಿ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದೆ ಈ ಉಪಸಮಿತಿ ನಿರ್ಣಯವನ್ನು ಕ್ಯಾಬಿನೆಟ್ ನಿರ್ಣಯ ಮಾಡಲಾಗುವುದು ಎಂದರು.

 

 

*ಹುಬ್ಬಳ್ಳಿ-ಧಾರವಾಡ ಸಂಚಾರ ದಟ್ಟಣೆ ನಿರ್ವಹಣೆ: ಅವಳಿ ನಗರದ 5 ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಕ್ರಮ*

https://pragati.taskdun.com/hubli-dharwadtrafic-management-5-circle-development/

ಅಪರಿಚಿತ ವ್ಯಕ್ತಿ ಶವ ಪತ್ತೆ

https://pragati.taskdun.com/unknown-dead-body-found-in-athani/

*ಅಭಿವೃದ್ಧಿಗೊಂಡ ತಿಂಗಳೊಳಗೆ ಹಾಳಾದ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿ….!*

https://pragati.taskdun.com/jamboti-jatta-highwaypoor-workpwdpublic-problems/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button