ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಬೆಳಗಾವಿ ಅಧಿವೇಶನದಲ್ಲಿ 2022-23ನೇ ಸಾಲಿನ ಪೂರಕ ಬಜೆಟ್ ಮಂಡಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಇಂದು ಕೊನೆಗೊಳ್ಳಲಿದ್ದು, ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, 2022-23ನೇ ಸಾಲಿನ ಪೂರಕ ಬಜೆಟ್ ಮಂಡಿಸಿದರು.
8,001.13 ಕೋಟಿ ರೂಪಾಯಿ ಅಂದಾಜಿನ ಪೂರಕ ಅಂದಾಜು ಬಜೆಟ್ ಮಂಡಿಸಿದ್ದಾರೆ. ಫೆಬ್ರವರಿಯಲ್ಲಿ ಸಿಎಂ ಬಜೆಟ್ ಮಂಡನೆ ಮಾಡಲಿದ್ದಾರೆ.
ವಿಪತ್ತು ನಿರ್ವಹಣೆಗೆ 1,396 ಕೋಟಿ ರೂ ಮೀಸಲು, ಮನೇಗ್ರಾ ಯೋಜನೆಗೆ 750 ಕೋಟಿ, ಇಂಧನ ಸೆಕ್ಟರ್ ನಲ್ಲಿ ಈಕ್ವಿಟಿ ಖರೀದಿಗೆ 500 ಕೋಟಿ, ಜನರಲ್ ಅಸೆಂಬ್ಲಿ ಚುನಾವಣೆಗೆ 300 ಕೋಟಿ, ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ಸ್ಕಿಂಗೆ 256 ಕೋಟಿ ರೂ, ರೈಲ್ವೆ ಯೋಜನೆಗೆ 250 ಕೋಟಿ, ನೀರಾವರಿ ಯೋಜನೆಗೆ 200 ಕೋಟಿ, 5 ಮೆಗಾ ಹಾಸ್ಟೇಲ್ ಗಳ ನಿರ್ಮಾಣಕ್ಕೆ 200 ಕೋಟಿ ಹಾಗೂ ಬಿಬಿಎಂಪಿಗೆ 2000 ಕೋಟಿ ಮೀಸಲಿಡಲಾಗಿದೆ.
*ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಯತ್ನ; ಮೂವರ ವಿರುದ್ಧ FIR ದಾಖಲು*
https://pragati.taskdun.com/bangaloreconvertionfir-file/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ