Latest

*ಪಂಚಭೂತಗಳಲ್ಲಿ ಲೀನರಾದ ಹೀರಾಬೆನ್*

ಪ್ರಗತಿವಾಹಿನಿ ಸುದ್ದಿ; ಗಾಂಧಿನಗರ: ಗುಜರಾತ್ ನ ಅಹಮದಾಬಾದ್ ನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದ ಪ್ರಧಾನಿ ನರೇಂದ್ರ ಮೋದಿ ತಾಯಿ, ಶತಾಯುಷಿ ಹೀರಾಬೆನ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ಹೀರಾಬೆನ್ ಅವರ ಅಂತ್ಯಕ್ರಿಯೆ ನೆರವೇರಿತು. ಪ್ರಧಾನಿ ಮೋದಿ ಹಾಗೂ ಸಹೋದರರು ತಾಯಿ ಹೀರಾಬೆನ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

Home add -Advt

ಇಂದು ಮುಂಜಾನೆ 3;30ರ ಸುಮಾರಿಗೆ ಹೀರಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತಾಯಿಯ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿಯವರು, ಅಂತಿಮಯಾತ್ರೆಯಲ್ಲಿ ತಾಯಿ ಹೀರಾಬೆನ್ ಮೃತದೇಹಕ್ಕೆ ಹೆಗಲುಕೊಟ್ಟು ಗಾಂಧಿನಗರದ ರಸ್ತೆಗಳಲ್ಲಿ ತಾಯಿ ಮೃತದೇಹ ಹೊತ್ತು ಸಾಗಿ ಅಂತಿಮ ವಿದಾಯ ಹೇಳಿದರು. ಬಳಿಕ ಪಾರ್ಥಿವಶರೀರವನ್ನು ಗಾಂಧಿನಗರದ ರುದ್ರಭೂಮಿಗೆ ತಂದು ಅಂತಿಮ ವಿಧಿವಿಧಾನ ನೆರವೇರಿಸಿ ಬಳಿಕ, ಹೀರಾಬೆನ್ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯಿತು.

ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ, ಅವರ ಸಹೋದರರು, ಗುಜರಾತ್ ಸಿಎಂ ಭುಪೇಂದ್ರ ಪಟೇಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್ ನಿಧನ

https://pragati.taskdun.com/prime-minister-narendra-modis-mother-heera-ben-passed-away/

Related Articles

Back to top button