Kannada NewsKarnataka NewsLatest

ಹೊಸ ವರ್ಷಾಚರಣೆ : ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸ್ ಕಾವಲು ಹೇಗಿದೆ ನೋಡಿ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಪ್ರಮುಖವಾಗಿ ಜಲಪಾತಗಳು, ನದಿ ತೀರಗಳು ಮತ್ತು ಫಾಲ್ಸ್‍ಗಳ ಸುತ್ತ ಮುತ್ತ ಹದ್ದಿನ ಕಣ್ಣಿಟ್ಟಿದ್ದಾರೆ.

ಹೊಸ ವರ್ಷಾಚರಣೆಗೆ ಜನ ಹೆಚ್ಚಾಗಿ ಸೇರುವ ತಾಣಗಳಿಗೆ ಸಂಜೆ 5 ಗಂಟೆಯಿಂದ ಪೊಲೀಸ್ ಕಾವಲು ಹಾಕಲಾಗಿದೆ. ಗೋಕಾಕ ಫಾಲ್ಸ್, ಗೊಡಚಿನಮಕ್ಕಿ ಫಾಲ್ಸ್, ಖಾನಾಪುರದ ವಜ್ರ ಫಾಲ್ಸ್ ಗಳಿಗೆ ತೆರಳುವ ಮಾರ್ಗಗಳಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ನಾಕಾ ಬಂದಿ ಮಾಡಲಾಗಿದೆ.

 

ಈ ಮಾರ್ಗದಲ್ಲಿ ತೆರಳುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ತೋರಗಲ್, ಕಿತ್ತೂರು ಕೋಟೆ, ಸವದತ್ತಿ ಕಿಲ್ಲಾ ಬಳಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

 

ಕಣಕುಂಬಿ, ಜಾಂಬೋಟಿಯ ಪ್ರವಾಸಿ ತಾಣಗಳು, ರಾಮದುರ್ಗದ ಶಿವ ದೇವಸ್ಥಾನಗಳಿಗೆ ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ.
ಹಿಡಕಲ್ ಡ್ಯಾಂ, ಮಾರ್ಕಾಂಡೇಯ ಮತ್ತು ನವಿಲು ತೀರ್ಥ ಜಲಾಶಯಗಳ ಬಳಿ ಪೊಲೀಸರು ಬೀಡು ಬಿಟ್ಟಿದ್ದಾರೆ.

 

ವೇದ ಗಂಗಾ, ದೂಧಗಂಗಾ, ಕೃಷ್ಣಾ, ಘಟಪ್ರಭಾ ನದಿಯ ತೀರಗಳಲ್ಲಿ ಪೊಲೀಸರು ಪಹರೆ ಕಾಯುತ್ತಿದ್ದಾರೆ.
ಹೊಸ ವರ್ಷವನ್ನು ಎಲ್ಲರೂ ಸಂಭ್ರಮದಿಂದ ಬರಮಾಡಿಕೊಳ್ಳೋಣ, ಆದರೆ ಯಾವುದೇ ರೀತಿಯ ಅವಘಡಕ್ಕೆ ಆಸ್ಪದವಾಗಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

*ಲೈಂಗಿಕ ಕಿರುಕುಳ; ಪ್ರೊಫೇಸರ್ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button