Latest

*ನಮ್ಮದು ಭಾರತ್ ಮಾತಾಕಿ ಜೈ; ಕಾಂಗ್ರೆಸ್ ನವರದ್ದು ಸೋನಿಯಾ ಮಾತಾಕಿ ಜೈ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಪಕ್ಷ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಅವರದ್ದು ಸೋನಿಯಾ ಮಾತಾಕಿ ಜೈ ಎಂದು ಜರಿದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕಾಂಗ್ರೆಸ್ ನಾಯಕರು ಕೇವಲ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ. ಅವರಿಗೆ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ. ನಮ್ಮದು ಭಾರತ್ ಮಾತಾಕಿ ಜೈ ಎಂದಾದರೆ ಕಾಂಗ್ರೆಸ್ ನವರದ್ದು ಸೋನಿಯಾ ಮಾತಾಕಿ ಜೈ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Home add -Advt

ಸಿದ್ದರಾಮಯ್ಯ ಸರ್ಕಾರ ಲೋಕಾಯುಕ್ತವನ್ನೇ ಮುಚ್ಚಿ ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕುವ ಯತ್ನ ನಡೆಸಿತು. ಇದೀಗ ಮತ್ತೆ ಲೋಕಾಯುಕ್ತ ಆರಂಭವಾಗಿದೆ. ಲೋಕಾಯುಕ್ತವನ್ನೇ ಮುಚ್ಚಿದವರು ಇಂದು ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ.ಎಸಿಬಿಯಲ್ಲಿ ಬಿ ರಿಪೋರ್ಟ್ ಆಗಿದ್ದ ಎಲ್ಲಾ ಪ್ರಕರಣಗಳು ಲೋಕಾಯುಕ್ತಕ್ಕೆ ಶಿಫಾರಸ್ಸಾಗಿವೆ. ಕಾಂಗ್ರೆಸ್ ನವರ ಎಲ್ಲಾ ಹಗರಣಗಳು ಹೊರ ಬರಲಿವೆ ಎಂದು ತಿಳಿಸಿದರು.

ಇಂದು ಬಿಜೆಪಿ ಜಗತ್ತಿನಲ್ಲೇ ಅತಿ ದೊಡ್ಡ ಪಕ್ಷವಾಗಿದೆ. ಚಿನಾದ ಕಮ್ಯುನಿಸ್ಟ್ ಪಕ್ಷಕ್ಕಿಂತಲೂ ಹೆಚ್ಚು ಸದಸ್ಯರನ್ನು ಬಿಜೆಪಿ ಹೊಂದಿದೆ. ನಾವು ಕೇವಲ ಸಂಖ್ಯೆಯಲ್ಲಷ್ಟೇ ಅಲ್ಲ ವಿಚಾರದಲ್ಲಿಯೂ ವಿಶಾಲತೆಯನ್ನು ಹೊಂದಿದ್ದೇವೆ ಎಂದು ಹೇಳಿದರು.

*ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಕ.ಸಾ.ಪ ಅಧ್ಯಕ್ಷ ನಾಡೋಜ.ಡಾ.ಮಹೇಶ ಜೋಶಿ ಆಗ್ರಹ*

https://pragati.taskdun.com/kannada-language-comprehensive-development-bill-2022-ordinance-president-of-kannada-sahitya-parishad-dr-nadoja-mahesh-joshi/

Related Articles

Back to top button