
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕಳೆದ ಶುಕ್ರವಾರ ಹರಿದ್ವಾರ ಬಳಿ ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡ ಕ್ರಿಕೆಟಿಗ ರಿಷಭ್ ಪಂತ್ ಅಪಘಾತದ ವೇಳೆ ಪಾನಮತ್ತರಾಗಿದ್ದರೇ ಎಂಬ ಜಿಜ್ಞಾಸೆಗಳ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ರಿಷಭ್ ಪಂತ್ ಅವರು ಅಪಘಾತದ ವೇಳೆ ಅತಿವೇಗ ಪಾನಮತ್ತ ಸ್ಥಿತಿಯಲ್ಲಿ ಇರಲಿಲ್ಲ ಎಂದು ಉತ್ತರಾಖಂಡ್ ಪೊಲೀಸರು ಶನಿವಾರ ಹೇಳಿದ್ದಾರೆ.
ಘಟನೆಯ ನಂತರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿದ್ದು, ರಿಷಭ್ ಕಾರು ಹೆಚ್ಚಿನ ವೇಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಒಂದುವೇಳೆ ಅವರು ಪಾನಮತ್ತರಾಗಿದ್ದರೆ ದೆಹಲಿಯಿಂದ 200 ಕಿ.ಮೀ. ದೂರದವರೆಗೆ ಅಪಘಾತ ರಹಿತವಾಗಿ ಕಾರು ಚಲಾಯಿಸಲು ಸಾಧ್ಯವಿರಲಿಲ್ಲ. ಅಪಘಾತದ ನಂತರ ಅವರನ್ನು ಪರೀಕ್ಷಿಸಿದ ವೈದ್ಯರು ಕೂಡ ಅವರು ಸಂಪೂರ್ಣವಾಗಿ ಸಾಮಾನ್ಯವಾಗಿದ್ದರು ಎಂದು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಅಜಯ್ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ನಾವು ಉತ್ತರ ಪ್ರದೇಶ ಗಡಿಯಿಂದ ನರ್ಸನ್‌ವರೆಗೆ ಅಪಘಾತ ಸ್ಥಳದಲ್ಲಿರುವ ಎಂಟರಿಂದ 10 ವೇಗದ ಕ್ಯಾಮೆರಾಗಳನ್ನು ಪರಿಶೀಲಿಸಿದ್ದೇವೆ, ರಿಷಭ್ ಕಾರು ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೂ ಗಂಟೆಗೆ 80 ಕಿಮೀ ವೇಗದ ಮಿತಿಯನ್ನು ದಾಟಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಗಾಳಿಯಲ್ಲಿ ತೂರಿ ಹೋದಂತಾದ ಕಾರಣ ಹೆಚ್ಚಿನ ವೇಗದಲ್ಲಿ ಕಾಣಿಸಿಕೊಂಡಿದೆ. ನಮ್ಮ ತಾಂತ್ರಿಕ ತಂಡವೂ ಅಪಘಾತದ ಸ್ಥಳವನ್ನು ಪರಿಶೀಲಿಸಿದೆ. ರಿಷಭ್ ಅತಿವೇಗವನ್ನು ಸೂಚಿಸುವ ಯಾವುದೇ ದೃಶ್ಯಾವಳಿಗಳೂ ಕಂಡುಬಂದಿಲ್ಲ.” ಎಂದಿದ್ದಾರೆ.
ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ರಿಷಭ್ ಅವರು ಕಾರು ಚಲಾಯಿಸುತ್ತಿದ್ದಾಗ ನಿದ್ದೆ ಮಂಪರಿಗೆ ಜಾರಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
*ABVP 42ನೇ ರಾಜ್ಯ ಸಮ್ಮೇಳನಕ್ಕೆ ಬೆಳಗಾವಿ ಸಜ್ಜು*
https://pragati.taskdun.com/abvp-42th-sammelanabelagavi/
*ಮಹದಾಯಿ ವಿಚಾರ; ಈಗ ಲೋಪದೋಷ ಹುಡುಕುವುದು ಕಾಂಗ್ರೆಸ್ ಮನಸ್ಥಿತಿಯನ್ನು ತೋರುತ್ತದೆ; ಸಿಎಂ ಕಿಡಿ*
https://pragati.taskdun.com/mahadaicm-basavaraj-bommaireactionhubli/
*ಹೊಸ ವರ್ಷಾಚರಣೆ ವೇಳೆ ದುರಂತ; ಕಟ್ಟಡದಿಂದ ಬಿದ್ದು ಯುವಕ ದುರ್ಮರಣ*
https://pragati.taskdun.com/new-yearpartyyouthdeathbangalore/